ನಕಲಿ ನೋಟುಗಳ ಹಾವಳಿ ಎಲ್ಲಿಲ್ಲ…? ಎಲ್ಲೆಡೆಯೂ ಇದೆ. ಇಂಗ್ಲೆಂಡಿನಲ್ಲೂ ಹಾವಳಿ ಹೆಚ್ಚಾಗಿದ್ದು, ನಾಗರಿಕರಿಗೆ ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಕಾರ್ನವಾಲ್ ಪ್ರದೇಶದ ಬಾಡ್ಮಿನ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅರಿವು ಮೂಡಿಸುತ್ತಿದ್ದು, ನಗರದಲ್ಲಿ ನಕಲಿ ನೋಟುಗಳನ್ನು ಅಂಗಡಿಗಳ ಮೂಲಕ ಚಲಾವಣೆ ಮಾಡಲು ಕೆಲ ದುಷ್ಕರ್ಮಿಗಳು ಯತ್ನಿಸುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಪೋಸ್ಟ್ ಮಾಡಿದ್ದಾರೆ.
ನಕಲಿ ನೋಟು ಹಿಡಿದು ಬಂದ ಕೆಲ ಅಂಗಡಿ ಮಾಲೀಕರಿಂದ ಮಾಹಿತಿ ದೊರೆತಿದ್ದು, ನೋಟುಗಳನ್ನು ಜಪ್ತಿ ಮಾಡಲಾಗಿದೆ. ಅವುಗಳ ಪೋಟೋಗಳನ್ನು ಸಹ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಅದರಲ್ಲಿ 20 ಪೂಂಡ್ ಎಂದು ಮುದ್ರಿಸಿದ್ದು, ಅದೊಂದು ಆಟಿಕೆ ನೋಟಿನಂತಿರುತ್ತದೆ. ಬಹಳ ಬೇಗನೆ ನಕಲಿ ಎಂಬುದು ಗೊತ್ತಾಗುತ್ತದೆ. ಯಾರೂ ಮೋಸ ಹೋಗಬೇಡಿ. ಪೊಲೀಸರ ಗಮನಕ್ಕೆ ತನ್ನಿ ಎಂದಿದ್ದಾರೆ.
https://www.facebook.com/BodminPolice/posts/2847699405330668