
ಆಯಸ್ಸು ಗಟ್ಟಿಯಾಗಿದ್ರೆ ಬಯಸಿದ್ರೂ ಸಾವು ಬರುವುದಿಲ್ಲ. ಈ ಬಾಲಕನ ಅದೃಷ್ಟ ಚೆನ್ನಾಗಿತ್ತು. 18ನೇ ಮಹಡಿಯಿಂದ ಕೆಳಗೆ ಬಿದ್ರೂ ಬಾಲಕನ ಜೀವ ಉಳಿದಿದೆ. ಘಟನೆ ಚೀನಾದ ಕ್ಸಿಯಾಂಗ್‌ಯಾಂಗ್‌ನಲ್ಲಿ ನಡೆದಿದೆ.
ಮನೆಯಲ್ಲಿ ನಾಲ್ಕು ವರ್ಷದ ಮಗು ಒಂಟಿಯಾಗಿತ್ತು ಎನ್ನಲಾಗಿದೆ. 18ನೇ ಮಹಡಿ ಮನೆಯಲ್ಲಿ ಆಟವಾಡ್ತಿದ್ದ ಮಗು ಕಿಟಕಿಯಿಂದ ಕೆಳಗೆ ಬಿದ್ದಿದೆ. 180 ಅಡಿ ಕೆಳಗೆ ಬಿದ್ರೂ ಮಗುವಿನ ಪ್ರಾಣ ಉಳಿದಿದೆ.
ಬಾಲಕ ಮರದ ಮೇಲೆ ಬಿದ್ದಿದ್ದಾನೆ ಎನ್ನಲಾಗಿದೆ. ಬಾಲಕನಿಗೆ ಗಂಭೀರ ಗಾಯವಾಗಿದೆ. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮಗು ಬಿದ್ದ ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರಂತೆ. ಇದೊಂದು ಪವಾಡವೆಂದು ವೈದ್ಯರು ಹೇಳಿದ್ದಾರೆ.