ಕೆನಡಾ: ಸಸ್ಯಹಾರಿ ಡೈನೋಸಾರ್ ನ 110 ಮಿಲಿಯನ್ ವರ್ಷಗಳ ಹಿಂದಿನ ಪಳೆಯುಳಿಕೆಗಳು ಪಶ್ಚಿಮ ಕೆನಡಾದಲ್ಲಿ ಪತ್ತೆಯಾಗಿವೆ.
ಕ್ರೆಟೇಶಿಯಸ್ ಕಾಲದ(ಜುರಾಸಿಕ್ ಕಾಲಕ್ಕಿಂತ ಸುಮಾರು 79 ಮಿಲಿಯ ವರ್ಷಗಳ ಹಿಂದೆ)ಬೊರೆಫೆಲ್ಟಾ ಮಾರ್ಕ್ ಮಿಚೆಲಿ ಎಂಬ ಹೆಸರಿನ ದೇಹದ ಮೇಲೆ ಕೋಡು, ಕೊಂಬು ಮುಂತಾದ ಆಯುಧಗಳನ್ನು ಹೊಂದಿದ್ದ ಅವು, ಎಲೆಯಂತ ಸಸ್ಯಾಹಾರಗಳನ್ನು ತಿನ್ನುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.
ಅವುಗಳ ಅಸ್ತಿ ಪಂಜರದ ಹೊಟ್ಟೆಯ ಭಾಗದಲ್ಲಿ ಅವು ತಿನ್ನುತ್ತಿದ್ದ ಸಸ್ಯಗಳ ಆಹಾರದ ಪಳೆಯುಳಿಕೆಗಳು ಅಲ್ಬೆರ್ಟಾ ಪ್ರಾಂತ್ಯದಲ್ಲಿ ಲಭ್ಯವಾಗಿವೆ.
ಅಸ್ಥಿಪಂಜರದ ಹೊಟ್ಟೆಯಲ್ಲಿ ಡೈನೋಸಾರ್ ಕೊನೆಯ ಬಾರಿ ತಿಂದ ಆಹಾರ ಸಸ್ಯದ ಎಲೆಗಳು ಅದರಲ್ಲಿದ್ದವು ಎಂದು ಸ್ಪಷ್ಟವಾಗಿ ಗೊತ್ತಾಗುವಂತಿದೆ.
“ಸಸ್ಯಹಾರಿ ಡೈನೋಸಾರ್ ಗಳ ನೇರ ಪಳೆಯುಳಿಕೆಗಳು ಸಿಕ್ಕಿದ್ದು ಬಹಳ ಅಪರೂಪ. ಹಲ್ಲು, ದವಡೆ, ಆಗ ಇದ್ದ ಸಸ್ಯಗಳು ಅದರಲ್ಲಿ ಎಷ್ಟು ಪೋಶಕಾಂಶಗಳು ಇದ್ದವು ಎಂಬುದರ ದಾಖಲೆಗಳು ಪರೋಕ್ಷವಾಗಿ ಲಭ್ಯವಾಗಿವೆ” ಎಂದು ಅಲ್ಬೆರ್ಟಾದ ರಾಯಲ್ ಟೈರೆಲ್ ಪ್ರಾಗ್ಜೀವ ವಸ್ತು ಸಂಗ್ರಹಾಲಯದ ಪ್ರಾಗ್ಜೀವ ಶಾಸ್ತ್ರಜ್ಞ ಕೇಬಲ್ ಬ್ರೌನ್ ಹೇಳಿದ್ದಾರೆ. ರಾಯಲ್ ಸೊಸೈಟಿ ಓಪನ್ ಸೈನ್ಸ್ ಪ್ರಕಟಿಸಿದ ಅಧ್ಯಯನ ಗ್ರಂಥದಲ್ಲಿ ಈ ವಿವರಗಳನ್ನು ನೀಡಿದ್ದಾರೆ.
ಬೊರೆಫೆಲ್ಟಾ ಮಾರ್ಕ್ ಮಿಚೆಲಿ ನೋಡೊಸಾರ್ಸ್ ವರ್ಗಕ್ಕೆ ಸೇರಿದೆ. ಸುಮಾರು 18 ಅಡಿ ಇದ್ದ ಒಂದುವರೆ ಟನ್ ಭಾರವಿತ್ತು. ಅತಿ ದೊಡ್ಡ ಆಮೆಯಾಕಾರದಲ್ಲಿ ಅಗಲವಾದ ದೇಹಕ್ಕೆ ಚಿಕ್ಕ ತಲೆ ಇತ್ತು. ನಾಲ್ಕು ಸಣ್ಣ ಕಾಲುಗಳ ಮೂಲಕ ನಡೆಯುತ್ತಿತ್ತು.
ಅದರ ಹೊಟ್ಟೆಯಲ್ಲಿದ್ದ ಪಳೆಯುಳಿಕೆಗಳು ನಿರ್ದಿಷ್ಟ ವರ್ಗದ ಸಸ್ಯಗಳಾಗಿವೆ. ಅಲ್ಲದೆ, ಇದ್ದಿಲಿನ ಚೂರೂ ಲಭ್ಯವಾಗಿದೆ. ಡೈನೋಸಾರ್ ಗಳು, ಪ್ರವಾಹಕ್ಕೆ ಅಥವಾ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸರ್ವನಾಶವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.