ಚೀನಾದ ನಿರ್ಲಕ್ಷ್ಯದಿಂದ ಜಗತ್ತಿನೆಲ್ಲೆಡೆ ಮರಣ ಮೃದಂಗ ಬಾರಿಸುತ್ತಾ ಸಾಗಿರುವ ಕೋವಿಡ್-19 ವೈರಾಣುಗಳು ಕಳೆದ ಮೂರೂವರೆ ತಿಂಗಳುಗಳಿಂದ ಎಲ್ಲೆಡೆ ಭೀತಿಯ ವಾತಾವರಣ ಸೃಷ್ಟಿ ಮಾಡಿವೆ.
ಜಗತ್ತಿನಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ ಐದು ಲಕ್ಷ ದಾಟಿದ್ದು, ಪ್ರತಿನಿತ್ಯವೂ ಸಹ ಸಾವುಗಳ ಸಂಖ್ಯೆ ಏರುತ್ತಲೇ ಸಾಗಿದೆ. ಸೋಂಕಿಗೆ ತುತ್ತಾಗಿ ಬಹಳ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ದೇಶಗಳಲ್ಲಿ ಒಂದಾದ ಸ್ಪೇನ್, ಇದೀಗ ಸೋಂಕಿನಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.
40 ಡ್ರೋನ್‌ಗಳನ್ನು ಬಳಸಿ, ರಾಜಧಾನಿ ಮ್ಯಾಡ್ರಿಡ್‌ನ ಆಗಸದಲ್ಲಿ LED ಬಲ್ಬ್‌ಗಳ ಮೂಲಕ ಬೆಳಕಿನ ಚಿತ್ತಾರ ಮೂಡಿಸುವ ಮೂಲಕ ಮೃತಪಟ್ಟ ಮಂದಿಗೆ ಶ್ರದ್ಧಾಂಜಲಿ ಅರ್ಪಿಸಿದೆ ಸ್ಪೇನ್.
https://twitter.com/MaHa17381622/status/1277229963914043394?ref_src=twsrc%5Etfw%7Ctwcamp%5Etweetembed%7Ctwterm%5E1277229963914043394%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fforty-drones-lit-up-madrid-skies-in-the-memory-of-the-covid-19-victims-watch%2F613617