ಚೀನಾದ ಸರ್ವೀಸ್ ಕೇಂದ್ರವೊಂದರಲ್ಲಿ ತನ್ನ ಮಾಲೀಕರು ಮರೆತು ಬಿಟ್ಟು ಹೋದ ಬಳಿಕ ನಾಯಿಯೊಂದು 60 ಕಿಮೀ ನಡೆದುಕೊಂಡು ಹೋಗಿ ಅವರ ಮನೆ ಸೇರಿಕೊಂಡಿದೆ.
ಹಾಂಗ್‌ಝೌ ಪ್ರದೇಶದಲ್ಲಿರುವ ಕಿಯೂ ಅವರು ತಮ್ಮ ಕುಟುಂಬದೊಂದಿಗೆ ಗ್ರಾಮಾಂತರ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಸವೀರ್ಸ್ ಕೇಂದ್ರವೊಂದರಲ್ಲಿ ಬ್ರೇಕ್ ತೆಗೆದುಕೊಳ್ಳಲು ನಿಂತಿದ್ದರು. ಈ ವೇಳೆ ಅವರ ಶ್ವಾನ ಡೌ ಡೌನನ್ನು ಕುಟುಂಬವು ಮರೆತು ಅಲ್ಲೇ ಬಿಟ್ಟು ಹೋಗಿಬಿಟ್ಟಿದೆ.
ಆದರೆ, ತನ್ನ ಕುಟುಂಬವನ್ನು ಕೂಡಿಕೊಳ್ಳಲೇಬೇಕೆಂದು ಪಣತೊಟ್ಟ ಡೌ ಡೌ, 26 ದಿನಗಳ ಕಾಲ ನಿರಂತರವಾಗಿ ನಡೆದುಕೊಂಡು 60 ಕಿಮೀ ಕ್ರಮಿಸಿ ತನ್ನ ಮನೆ ಸೇರಿಕೊಂಡಿದೆ.
ನಾಯಿಯನ್ನು ಮರೆತಿದ್ದ ಮಾಲೀಕ ಸರ್ವೀಸ್ ಕೇಂದ್ರದ ಬಳಿ ಬಂದು ನೋಡಿದಾಗ ಅದು ಅಲ್ಲಿ ಇಲ್ಲದೇ ಇದ್ದದ್ದನ್ನು ಕಂಡು ಅದರ ಮೇಲಿನ ಆಸೆ ಕೈ ಬಿಟ್ಟಿದ್ದ ಕುಟುಂಬಕ್ಕೆ 26 ದಿನಗಳ ಬಳಿಕ ಈ ಪ್ಲೆಸೆಂಟ್ ಸರ್ಪೈಸ್ ಸಿಕ್ಕಿದೆ.