ಮೆಲ್ಬೋರ್ನ್: ಸಹೋದ್ಯೋಗಿಯೊಬ್ಬರ ಹುಟ್ಟುಹಬ್ಬ ಆಚರಣೆಗೆ ಮೆಲ್ಬೋರ್ನ್ ವೃದ್ಧಾಶ್ರಮದ ನರ್ಸ್ ಗಳು ಕೇಸರಿ ಸೀರೆಯುಟ್ಟು, ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದಾರೆ. ಆದರೆ, ಅವರು ಕೊರೊನಾ ಭಯ, ಸುರಕ್ಷತಾ ಕ್ರಮ ಮರೆತ ಬಗ್ಗೆ ಆಕ್ಷೇಪ ಕೇಳಿ ಬಂದಿದೆ.
ಪೂರ್ವ ಮೆಲ್ಬೋರ್ನ್ ನಗರದ ನೂನಾವಾಂಡಿಂಗ್ ಎಂಬಲ್ಲಿನ ಎಂಡ್ವಾಂಟ್ ಕೇರ್ ವೈಟ್ ಹವರ್ಸ್ ಎಂಬ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ.
ಈ ಪಾರ್ಟಿಯ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ನಾವು ಲಾಕ್‌ಡೌನ್ 4 ಲ್ಲಿ ಇದ್ದೇವೆ ಎಂದು ಗೊತ್ತಾಗದು ಎಂದು ಕ್ಯಾಪ್ಶನ್ ನೀಡಲಾಗಿದೆ.
ವಿಡಿಯೋದಲ್ಲಿ ನರ್ಸ್ ಗಳು ಮಾಸ್ಕ್, ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್ ಧರಿಸಿಲ್ಲ. ಬರಿ ಕೈಯ್ಯಲ್ಲಿ ವೃದ್ಧರನ್ನು ಮುಟ್ಟಿರುವುದು ವಿಡಿಯೋದಲ್ಲಿ ದಾಖಲಾಗಿದೆ. “ನಾವು ಪಾರ್ಟಿಗೆ ಹೊರಗಿನ ಜನರನ್ನು ಕರೆಸಿಲ್ಲ ಎಂದು ನರ್ಸ್ ಗಳು ಸ್ಪಷ್ಟನೆ ನೀಡಿದ್ದರೂ ಅವರು ಹೊರಗೆ ಬೇರೆ ಬೇರೆ ಸಮುದಾಯದ ಜತೆ ಬೆರೆತು ಬರುವುದು ಎಲ್ಲರಿಗೂ ತಿಳಿದಿದೆ.
ಕೊರೊನಾ ವಿಷಯದಲ್ಲಿ ವೃದ್ಧರನ್ನು ” ವಲ್ನರೇಬಲ್ ಗ್ರೂಪ್” ಎಂದು ಗುರುತಿಸಿರುವುದರಿಂದ ನರ್ಸ್ ಗಳ ಕಾರ್ಯ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. ನರ್ಸ್ ಗಳು ಪಾರ್ಟಿ ನಂತರ ಪಿಪಿಇ ಕಿಟ್ ಧರಿಸಿದ್ದಾರೆ ಎಂದು ವೃದ್ಧಾಶ್ರಮದ ಸಿಇಒ ತೇಪೆ ಹಚ್ಚುವ ಯತ್ನ ಮಾಡಿದ್ದಾರೆ. ಈ ಸಂಬಂಧ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.