ರೋಮ್, ಇಟಲಿ: ಕೊರೋನಾ ಸೋಂಕು ಜೀವವನ್ನಷ್ಟೇ ಕಿತ್ತುಕೊಳ್ಳದೆ, ಬಹುತೇಕರ ಸಂತೋಷವನ್ನೇ ಕಿತ್ತುಕೊಂಡಿದೆ. ಮದುವೆಯಾಗಿ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಬೇಕು ಎಂದೆಲ್ಲ ಪ್ಲಾನ್ ಮಾಡಿಕೊಂಡಿದ್ದವರಿಗೆ ಇಟಲಿಯಲ್ಲಿ ಕೊರೋನಾ ಶಾಕ್ ಕೊಟ್ಟಿದ್ದರಿಂದ ಚರ್ಚ್ ಬಾಗಿಲನ್ನೂ ಸಹ ಮುಚ್ಚಲಾಗಿದೆ. ಅಲ್ಲದೆ, ವಿವಾಹ ಸಮಾರಂಭಗಳಿಗೂ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ವಧುಗಳು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ.
ಟ್ರೇವಿ ಫೌಂಟೇನ್ ಹಾಗೂ ಪಾರ್ಲಿಮೆಂಟರಿ ಕಟ್ಟಡದ ಎದುರು ಪ್ಲೇ ಕಾರ್ಡ್ ಹಿಡಿದು ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಪ್ರತಿಭಟನೆಯನ್ನು ಇಟಲಿಯನ್ ವೆಡ್ಡಿಂಗ್ ಅಸೋಸಿಯೇಷನ್ ಹಾಗೂ ಅವಿವಾಹಿತರು ಹಮ್ಮಿಕೊಂಡಿದ್ದರು.
ಮದುವೆಗೆ ಯಾವುದೇ ನಿರ್ಬಂಧ ಇರಕೂಡದು. ಯಾವುದೇ ನಿರ್ಬಂಧವಿಲ್ಲದೆ ನೀವು ನಮ್ಮ ಮದುವೆ ಮುರಿದಿದ್ದು, ಚರ್ಚ್ ಬಾಗಿಲನ್ನು ಮುಚ್ಚಿದ್ದೀರಿ ಎಂದೆಲ್ಲ ಪ್ಲೇ ಕಾರ್ಡ್ ನಲ್ಲಿ ಬರೆದುಕೊಳ್ಳಲಾಗಿದೆ. ಲಾಕ್ ಡೌನ್ ಗಿಂತ ಮುಂಚೆ ಮದುವೆಗೆ ಅವಕಾಶವಿದ್ದರೂ ಇಬ್ಬರು ಅತಿಥಿಗಳು ಮಾತ್ರ ವಿವಾಹ ಸಮಾರಂಭದಲ್ಲಿ ಭಾಗವಹಿಸಬಹುದಾಗಿತ್ತು. ಈಗ ಅದೂ ಇಲ್ಲವಾಗಿದೆ.