ಸುಮಾರು 10 ವರ್ಷಗಳ ಹಿಂದೆ ಸುನಾಮಿಯಿಂದಾಗಿ ಕಾಣೆಯಾಗಿದ್ದ ಮೀನುಗಾರಿಕಾ ದೋಣಿಯೊಂದು ಫೆಸಿಫಿಕ್ನ ಒಂದು ಸಣ್ಣ ದ್ವೀಪದಲ್ಲಿ ಪತ್ತೆಯಾಗಿದೆ.
ವರದಿಗಳ ಪ್ರಕಾರ 2011ರ ಗ್ರೇಟ್ ಈಸ್ಟ್ ಜಪಾನ್ ಭೂಕಂಪದ ಬಳಿಕ ಈ ದೋಣಿ ನಾಪತ್ತೆಯಾಗಿತ್ತು. ಈ ಭೂಕಂಪ ದುರಂತದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಜಪಾನ್ನಲ್ಲಿ 9.0 ತೀವ್ರತೆ ದಾಖಲಿಸಿದ ಅತ್ಯತ ಶಕ್ತಿಶಾಲಿ ಭೂಕಂಪ ಅದಾಗಿತ್ತು.
ಈ ಸಮಯದಲ್ಲಿ ಕಾಣೆಯಾಗಿದ್ದ ದೋಣಿಯೊಂದು ಜಪಾನ್ನಿಂದ ದಕ್ಷಿಣಕ್ಕೆ 4-4 ಮೈಲಿ ದೂರದಲ್ಲಿರುವ ಹಚಿಜೊ ದ್ವೀಪದಲ್ಲಿ ಕಾಣಸಿಕ್ಕಿದೆ. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿ ಆಧರಿಸಿ 18 ಅಡಿ ಉದ್ದದ ದೊಣಿಯನ್ನ ಶೋಧಿಸಿದ ಬಳಿಕ ಕೆಸೆನುಮಾ ಮೀನುಗಾರಿ ನೌಕಾಪಡೆ ಇದನ್ನ ವಶಕ್ಕೆ ಪಡೆದುಕೊಂಡಿದೆ.