ನೀವು ಭೂಮಿಯ ಮೇಲೆ ಹೋಟೆಲ್ನ್ನು ನೋಡೇ ಇರ್ತಿರಾ….ಅಂಡರ್ವಾಟರ್ನಲ್ಲೂ ಹೋಟೆಲ್ಗಳನ್ನ ನಿರ್ಮಾಣ ಮಾಡೋ ಸಾಹಸವನ್ನ ಈಗಾಗಲೇ ಕೆಲ ಮಂದಿ ಮಾಡಿದ್ದಾರೆ. ಇದೀಗ ಈ ಬಾಹ್ಯಾಕಾಶದಲ್ಲೂ ಹೋಟೆಲ್ ನಿರ್ಮಾಣವಾಗಲಿದ್ದು 2027ರ ವೇಳೆಗೆ ಲಾಂಚ್ ಆಗಲಿದೆ ಎಂದು ವರದಿಯಾಗಿದೆ.
ವಾಯೇಜರ್ ಎಂಬ ಹೆಸರಿನ ಬಾಹ್ಯಾಕಾಶ ಹೋಟೆಲ್ನಲ್ಲಿ 400 ಮಂದಿ ತಂಗಬಹುದಾಗಿದೆ. ಹೋಟೆಲ್ ರೂಂಗಳ ಜೊತೆಯಲ್ಲಿ ಇಲ್ಲಿ ಬಾರ್, ಸಿನೆಮಾ, ರೆಸ್ಟಾರೆಂಟ್, ಕಾನ್ಸರ್ಟ್, ಸ್ಪಾ, ಜಿಮ್ ಸೇರಿದಂತೆ ಇನ್ನೂ ಹಲವು ಸೌಕರ್ಯಗಳು ಇರಲಿವೆ.
ಆರ್ಬಿಟಲ್ ಅಸೆಂಬ್ಲಿ ಕಾರ್ಪೋರೇಷನ್ ಎಂಬ ಕಂಪನಿ ವಾಯೇಜರ್ ಬಾಹ್ಯಾಕಾಶ ಹೋಟೆಲ್ನ್ನು ನಿರ್ಮಿಸಲು ಪ್ಲಾನ್ ರೂಪಿಸುತ್ತಿದೆ. 2025ರ ವೇಳೆಗೆ ಹೋಟೆಲ್ ನಿರ್ಮಾಣ ಆರಂಭಕ್ಕೆ ಕಂಪನಿ ಚಿಂತನೆ ನಡೆಸಿದ್ದು 2027ಕ್ಕೆ ಲೋಕಾರ್ಪಣೆ ಮಾಡುವ ಗುರಿ ಹೊಂದಿದೆ.
ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ ವಾಯೇಜರ್ ಕ್ಲಾಸ್ ಬಾಹ್ಯಾಕಾಶ ನಿಲ್ದಾಣವನ್ನ ತಿರುಗುವ ಬಾಹ್ಯಾಕಾಶ ನಿಲ್ದಾಣ ಎಂದು ವರ್ಣಿಸಬಹುದಾಗಿದೆ. ಸರಿಯಾದ ತರಬೇತಿ ಇಲ್ಲದ ಸಾಮಾನ್ಯ ಜನತೆಗೆ ಶೂನ್ಯ ಗುರುತ್ವಾಕರ್ಷಣಾ ಜಾಗದಲ್ಲಿ ಇರೋದು ಕಷ್ಟವಾಗುವ ಕಾರಣ ಇಲ್ಲಿ ಚಂದ್ರನ ಮೇಲ್ಮೈಯಲ್ಲಿರುವ ಗುರುತ್ವಾಕರ್ಷಣದಷ್ಟು ಈ ಹೋಟೆಲ್ನಲ್ಲೂ ಇರಲಿದೆ. 90 ನಿಮಿಷಗಳಲ್ಲಿ ಈ ಹೋಟೆಲ್ ಭೂಮಿಯ ಸುತ್ತ ಪ್ರಯಾಣ ಬೆಳೆಸಲಿದೆ.
https://youtu.be/Ao5o3EgQ-sU?t=85