ವಾಣಿಜ್ಯವಾಗಿ ಮುದ್ರಿತವಾದ ವಿಶ್ವದ ಮೊದಲ ಕ್ರಿಸ್ಮಸ್ ಕಾರ್ಡ್ ಮಾರಾಟಕ್ಕೆ ಸಿದ್ಧವಾಗಿದೆ. 1843ನೇ ವರ್ಷದ ಮೆರ್ರಿ ವಿಕ್ಟೋರಿಯನ್ ಯುಗದ ಕ್ರಿಸ್ಮಸ್ ಕಾರ್ಡ್ ಇದಾಗಿದೆ.
ಅಪರೂಪದ ಪುಸ್ತಕಗಳು ಹಾಗೂ ಹಸ್ತಪ್ರತಿಗಳ ಮಾರಾಟಗಾರ ಬೋಸ್ಟನ್ ಮೂಲದ ವ್ಯಾಪಾರಿ ಮಾರ್ವಿನ್ ಗೆಟ್ ಮ್ಯಾನ್ ನೇತೃತ್ವದ ಒಕ್ಕೂಟ ಶುಕ್ರವಾರದಿಂದ ಈ ಕಾರ್ಡ್ನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕಿರಿಸಿದೆ. ಕೈಯಲ್ಲಿ ವೈನ್ ಹಿಡಿದ ಕ್ರಿಶ್ಚಿಯನ್ ಕುಟುಂಬವೊಂದು ಕ್ರಿಸ್ಮಸ್ ಹಬ್ಬಕ್ಕೆ ಶುಭ ಕೋರುತ್ತಿರುವ ರೀತಿಯಲ್ಲಿ ಕಾರ್ಡ್ ಮೇಲೆ ಚಿತ್ರವನ್ನ ಮುದ್ರಿಸಲಾಗಿದೆ.
ಮೇರಿ ಕ್ರಿಸ್ಮಸ್ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯ ಎಂದು ಕಾರ್ಡ್ ಮೇಲೆ ಬರೆಯಲಾಗಿದೆ. ಚಿತ್ರದಲ್ಲಿ ಪುಟಾಣಿ ಹುಡುಗಿಯಿಂದ ಹಿಡಿದು ವಯಸ್ಕರು ವೈನ್ ಗ್ಲಾಸ್ ಹಿಡಿದಿರೋದನ್ನ ಕಾಣಬಹುದಾಗಿದೆ. ಆದರೆ ಈ ಕಾರ್ಡ್ ಆ ಕಾಲದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.