ಅಮೆರಿಕದಲ್ಲಿ ಕೊರೊನಾ ವೈರಸ್ ಲಸಿಕೆಯನ್ನು ಮೊದಲು ಪಡೆದ ಮಹಿಳೆ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಲಸಿಕೆ ಕುರಿತ ಅಧ್ಯಯನದ ಮೊದಲ ಸುತ್ತಿನಲ್ಲಿ, 43 ವರ್ಷದ ಜೆನ್ನಿಫರ್ ಹೊಲ್ಲರ್‌ಗೆ ಮಾರ್ಚ್‌ನಲ್ಲಿ ಲಸಿಕೆ ನೀಡಲಾಯಿತು. 16 ವಾರಗಳ ನಂತರವೂ ಜೆನ್ನಿಫರ್ ದೇಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಕಂಡುಬಂದಿಲ್ಲ.
ಅಮೆರಿಕದ ಸಿಯಾಟಲ್ ಮೂಲದ ಜೆನ್ನಿಫರ್, ನಾನು ಸಾಕಷ್ಟು ಆರಾಮಾಗಿದ್ದೇನೆ ಎಂದಿದ್ದಾರೆ. ಜೆನ್ನಿಫರ್ ಹೊಲ್ಲರ್‌ಗೆ ಕೊರೊನಾದ ಎಂಆರ್‌ಎನ್‌ಎ -1273 ಹೆಸರಿನ ಲಸಿಕೆ ನೀಡಲಾಯಿತು. ಅಮೆರಿಕದ ಕೆಪಿ ವಾಷಿಂಗ್ಟನ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಈ ಲಸಿಕೆ ಬಗ್ಗೆ ಅಧ್ಯಯನ ನಡೆಯುತ್ತಿದೆ.
ಈ ಲಸಿಕೆಯಿಂದ ವ್ಯಕ್ತಿಗೆ ಕೊರೊನಾ ಸೋಂಕು ಬರಲು ಸಾಧ್ಯವಿಲ್ಲ ಎಂದು ಕಂಪನಿ ಹೇಳುತ್ತಿದೆ.