ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಸನ್ನಾ ಮಾರಿನ್ ತಮ್ಮ ಸುದೀರ್ಘಾವಧಿಯ ಇನಿಯ ಹಾಗೂ ಫಿನ್ನಿಶ್ ಫುಟ್ಬಾಲ್ ಆಟಗಾರ ಮಾರ್ಕಸ್ ರಾಯ್ಕೋನೆನ್ರನ್ನು ವರಿಸಿದ್ದಾರೆ. ಮಾರಿನ್ ಫಿನ್ಲೆಂಡ್ನ ಪ್ರಧಾನ ಮಂತ್ರಿಯಾಗಿದ್ದಾರೆ.
ಮಾರಿನ್ ಹಾಗೂ ರಾಯ್ಕೋನೆನ್ ಇಬ್ಬರೂ 34 ವರ್ಷ ವಯಸ್ಸಿನವರಾಗಿದ್ದಾರೆ. ಕಳೆದ 16 ವರ್ಷಗಳಿಂದಲೂ ಇಬ್ಬರೂ ಪ್ರೀತಿಯಲ್ಲಿದ್ದಾರೆ. ಮೊದಲ ಬಾರಿಗೆ ಭೇಟಿಯಾದಾಗ ಇಬ್ಬರಿಗೂ 18 ವರ್ಷ ವಯಸ್ಸಾಗಿತ್ತು. ಇಬ್ಬರಿಗೂ ಎರಡೂವರೆ ವರ್ಷದ ಎಮ್ಮಾ ಅಮಾಲಿಯಾ ಮಾರಿನ್ ಹೆಸರಿನ ಮಗಳಿದ್ದಾಳೆ.
ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದ ವೇಳೆ ತೀರಾ ಹತ್ತಿರದವರಾದ 40 ಮಂದಿ ಅತಿಥಿಗಳು ಆಗಮಿಸಿದ್ದರು.
https://www.instagram.com/p/CDYooLZD6vz/?utm_source=ig_embed
https://www.instagram.com/p/CDZh6PUBmF6/?utm_source=ig_embed