10 ವರ್ಷದೊಳಗಿನ ಮಕ್ಕಳೊಂದಿಗೆ ವೀಕೆಂಡ್ ಟ್ರೆಕ್ಕಿಂಗ್ ಎಂದರೆ ಸಹಜವಾಗಿ ನೀವು ಯಾವುದೇ ಕಾರಣಕ್ಕೂ ಚಾರಣ ಅದರಲ್ಲೂ, ಬೆಟ್ಟ ಹತ್ತುವ ಸಾಹಸಕ್ಕೆ ಕೈಹಾಕುವುದಿಲ್ಲ.
ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿ ಹೋಲ್ಡಿಂಗ್ ಕುಟುಂಬ ಬರೋಬ್ಬರಿ 11 ಸಾವಿರ ಅಡಿ ಎತ್ತರದಲ್ಲಿರುವ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದಾರೆ.
ವೃತ್ತಿಪರ ಟ್ರೆಕ್ಕರ್‌ಗಳಾಗಿರುವ ಲಿಯೋ ಹೋಲ್ಡಿಂಗ್ ಹಾಗೂ ಜಾಕ್ಸನ್ ದಂಪತಿ ಈ ಸಾಹಸ ಮಾಡಿದ್ದು, ಈ ವಿಡಿಯೊ ವೈರಲ್ ಆಗಿದೆ.
ಸ್ವಿಜರ್ಲ್ಯಾಂಡ್‌ನ ಪಾಜ್ ಬಡೀಲಾ ಬೆಟ್ಟಗಳಿಗೆ ಚಾರಣ ಹೋಗಿರುವ ಕುಟುಂಬದಲ್ಲಿ ಮೂರು ವರ್ಷದ ಜೆಸ್ಸಿಕಾ, ಏಳು ವರ್ಷದ ಫ್ರೇಯಾ ಇದ್ದಾರೆ. ಜೆಸ್ಸಿಕಾಳನ್ನು ಆಕೆಯ ತಾಯಿ ಲಿಯೋ ಹೊತ್ತಿದ್ದರೆ, ಇನ್ನುಳಿದ ಸಾಮಾನುಗಳನ್ನು ಜಾಕ್ಸನ್ ಹೊತ್ತಿದ್ದಾರೆ. ಆದರೆ ಫ್ರೆಯಾ ತಾನೇ ಬೆಟ್ಟಗಳನ್ನು ಏರಿದ್ದಾರೆ. ಕುಟುಂಬ ಸದಸ್ಯರು ಎರಡು ದಿನ ಟ್ರೆಕ್ಕಿಂಗ್ ತೆರಳಿರುವ ಫೋಟೋ ಇದೀಗ ವೈರಲ್ ಆಗಿದೆ.