
ಶಾಲೆಗಳಿಗೂ ಸಹ ಈ ಮಾತು ಅನ್ವಯವಾಗುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಪಾಠ ಹೇಳಿಕೊಡುತ್ತಿದ್ದು, ಅಂತರ್ಜಾಲದ ಮುಖಾಂತರ ನಿರಂತರ ಸಂಪರ್ಕದಲ್ಲಿರುತ್ತಾರೆ. ಹೀಗಾಗಿ, ಶಾಲೆಗೆ ಹೋಗುವ ಎಲ್ಲಾ ಮಕ್ಕಳಿಗೂ ಸಹ ಅಂತರ್ಜಾಲದ ಸಂಪರ್ಕ ಹಾಗೂ ಅಕ್ಸೆಸರಿಗಳು ಅಗತ್ಯವಾಗಿಬಿಟ್ಟಿವೆ.
ಲಿಲ್ಲಿಯನ್ ಎಂಬ ಪುಟಾಣಿ ಹೆಣ್ಣುಮಗಳೊಬ್ಬಳಿಗೆ ಆಕೆಯ ಅಪ್ಪ ಗ್ಯಾರೇಜ್ನಲ್ಲೇ ಕ್ಲಾಸ್ರೂಂ ಅನ್ನು ಸೃಷ್ಟಿಸಿಕೊಟ್ಟಿದ್ದಾರೆ. ರೆಡ್ಡಿಟ್ನಲ್ಲಿ ಈ ಪೋಸ್ಟ್ ಹಾಕಿದ್ದು, ಥೇಟ್ ಕ್ಲಾಸ್ರೂಂ ರೀತಿಯ ವಾತಾವರಣ ಸೃಷ್ಟಿಸಲು ಶಿಕ್ಷಕಿಯ ಕಟ್ಔಟ್ ಮಾಡಲಾಗಿದೆ. ಹಿನ್ನೆಲೆಯಲ್ಲಿ ಬಿಳಿಯ ಬೋರ್ಡ್ ಒಂದು ಇದ್ದು, ಅದರಲ್ಲಿ, ’ಲಿಲ್ಲಿಯನ್ ಳ ಕ್ಲಾಸ್ರೂಂ’ ಎಂದು ಬರೆಯಲಾಗಿದೆ. ಈ ವಿಡಿಯೋ ನೋಡಿದ ಸಾಕಷ್ಟು ಅಪ್ಪಂದಿರಿಗೆ ಹೊಸ ರೀತಿ ’ಡ್ಯಾಡ್ ಗೋಲ್ಸ್’ ಹುಟ್ಟಿಕೊಂಡಿವೆ.