ಸಹೃದಯಿಯೊಬ್ಬರು ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ಮೆರೆದ ಸಮಯಪ್ರಜ್ಞೆಯ ಕಾರಣದಿಂದ ಪುಟಾಣಿ ಮಗು ಹಾಗೂ 12 ಅಡಿ ಉದ್ದ ಹಾಗೂ 270 ಕೆಜಿ ತೂಕದ ಮೊಸಳೆಯೊಂದರ ರಕ್ಷಣೆ ಮಾಡಲಾಗಿದೆ.
ತಮ್ಮ ಮನೆಯ ಹಿಂದಿನ ಅಂಗಳದಲ್ಲಿ ಪುಟ್ಟ ಮಗುವಿನೊಂದಿಗೆ ಕಾಲ ಕಳೆಯುತ್ತಿದ್ದ ವೇಳೆ, ಕಾಲುವೆಯೊಂದರಿಂದ ಮೇಲೆದ್ದು ಬಂದ ಮೊಸಳೆಯೊಂದು ಕಣ್ಣಿಗೆ ಕಾಣುತ್ತಲೇ ತೋರಿದ ಚುರುಕು ಪ್ರತಿಕ್ರಿಯೆಯು ಅವರ ಜೀವ ಉಳಿಸಿದೆ. ಆಂಡ್ರ‍್ಯೂ ತ್ವರಿತವಾಗಿ ಪ್ರತಿಕ್ರಿಯಿಸಿದರೂ ಸಹ, ಆ ಮೊಸಳೆ ಮಗುವಿನಿಂದ ಕೇವಲ ಮೂರು ಅಡಿ ದೂರದಲ್ಲಿ ಬಂದು ನಿಂತಿದೆ.
ಕೂಡಲೇ ತನ್ನ ಮಕ್ಕಳನ್ನು ಹಿತ್ತಲಿನಿಂದ ಹೊರಗೆಳೆದುಕೊಂಡ ಆಂಡ್ರ‍್ಯೂ, ಮೊಸಳೆ ಹಿಡಿಯುವವರನ್ನು ಸಂಪರ್ಕಿಸಿ ಅದನ್ನೂ ಸಹ ಸುರಕ್ಷಿತವಾಗಿ ಅಲ್ಲಿಂದ ಹೊರಗೆಳೆಯಿಸುವಲ್ಲಿ ಸಫಲರಾಗಿದ್ದಾರೆ. ಮೊಸಳೆಯನ್ನು ಹಿಡಿಯುವ ಸಣ್ಣದೊಂದು ವಿಡಿಯೋ ಕ್ಲಿಪ್ ಸಾಮಾಜಿಕಕ ಜಾಲತಾಣದಲ್ಲಿ ವೈರಲ್ ಆಗಿದೆ.