
ಕೆಲದಿನಗಳ ಹಿಂದಷ್ಟೇ ರಿಪಡ್ ಜೀನ್ಸ್ ಭಾರೀ ವಿವಾದವೊಂದನ್ನ ಹುಟ್ಟುಹಾಕಿತ್ತು. ಇದಾದ ಬಳಿಕ ಅನೇಕರು ಬೇಕು ಬೇಕಂತಲೇ ಹರಿದ ಜೀನ್ಸ್ ಧರಿಸಿ ನಮ್ಮ ಡ್ರೆಸ್ ನಮ್ಮ ವ್ಯಕ್ತಿತ್ವ ಸಾರಲ್ಲ ಎಂಬ ಸಂದೇಶ ಸಾರಿದ್ರು.
ಆದರೆ ಇದೀಗ ಇನ್ನೊಂದು ರೀತಿಯ ಜೀನ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದನ್ನ ನೋಡಿದ್ರೆ ನಿಮ್ಮ ಕಣ್ಣನ್ನೇ ನಿಮಗೆ ನಂಬಲು ಸಾಧ್ಯವಾಗದೇ ಇರಬಹುದು. ದಕ್ಷಿಣ ಕೊರಿಯಾದ ಲೆಜೆ ಎಂಬ ಬ್ರ್ಯಾಂಡ್ ಈ ರೀತಿಯ ವಿಚಿತ್ರ ಜೀನ್ಸ್ನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇದನ್ನ ನೀವು ಸ್ಲ್ಯಾಶ್ ಅಥವಾ ಎಲ್ ಜೀನ್ಸ್ ಎಂದು ಕರೆಯಬಹುದಾಗಿದೆ. ಇದು ಜೀನ್ಸ್ ಪ್ಯಾಂಟ್ನ್ನು ಇನ್ನೊಂದು ಹಂತಕ್ಕೆ ಕರೆದೊಯ್ದಿದೆ.
ಇದು ಫ್ರೂಟ್ ನಿಂಜಾ ಗೇಮ್ನ್ನು ನೆನಪಿಸುವಂತಹ ಪ್ಯಾಂಟ್ ಆಗಿದ್ದರೆ ಇದೇ ರೀತಿ ವೈರಲ್ ಆದ ಇನ್ನೊಂದು ಪ್ಯಾಂಟ್ ಚೂಪಾದ ಖಡ್ಗದಿಂದ ಕತ್ತರಿಸಿದಂತೆ ಕಾಣಿಸುತ್ತೆ. ವೆಬ್ಸೈಟ್ನಲ್ಲಿ ಈ ಪ್ಯಾಂಟ್ಗಳು ಲಭ್ಯವಿದ್ದು, ಇವುಗಳ ಬೆಲೆ 30 ಸಾವಿರ ರೂಪಾಯಿ ಆಗಿದೆ. ಈ ಹೊಸ ಫ್ಯಾಶನ್ ಟ್ರೆಂಡ್ ಟ್ರೋಲಿಗರ ಬಾಯಿಗೆ ಒಳ್ಳೆಯ ಆಹಾರವಾಗಿದೆ.
