ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಫ್ಯಾಷನ್ ನೋಡಲು ಸಿಗ್ತಿದೆ. ಕೆಲ ಫ್ಯಾಷನ್ ಆಸಕ್ತಿ ಹುಟ್ಟಿಸಿದ್ರೆ ಮತ್ತೆ ಕೆಲವು ಹುಬ್ಬೇರಿಸುವಂತೆ ಮಾಡುತ್ತವೆ. ಯುಕೆ ಫ್ಯಾಷನ್ ವಿನ್ಯಾಸಕಿಯೊಬ್ಬಳು ವಿಚಿತ್ರ ಫ್ಯಾಷನ್ ನಿಂದ ಸುದ್ದಿಯಲ್ಲಿದ್ದಾಳೆ.
ಮಹಾರಿ ಹೆಸರಿನ ಫ್ಯಾಷನ್ ಡಿಸೈನರ್ ರೈಲ್ವೆ ಸೀಟ್ ಕವರನ್ನು ಉಡುಗೊಗೆಯಾಗಿ ಧರಿಸಿದ್ದಾಳೆ. ಅದ್ರ ಮೇಲ್ಬಾಗದಲ್ಲಿ ಬರೆದಿರುವ ವಿಷ್ಯ ಚರ್ಚೆಯಲ್ಲಿದೆ. ಯುಕೆ ಯ ಚಿಲ್ಟರ್ನ್ ರೈಲಿನಿಂದ ಕವರ್ ಕದ್ದಿದ್ದಾಳೆ ಮಹಾರಿ. ಅದನ್ನು ಮೇಲುಡುಗೆಯಾಗಿ ಧರಿಸಿದ್ದಾಳೆ. ಕೊರೊನಾ ಸಂದರ್ಭದಲ್ಲಿ ಜನರನ್ನು ಜಾಗೃತಿಗೊಳಿಸಲು ಇದನ್ನು ಧರಿಸಿರುವುದಾಗಿ ಮಹಾರಿ ಹೇಳಿದ್ದಾಳೆ.
ರೈಲಿನಲ್ಲಿ ಪ್ರಯಾಣ ಬೆಳೆಸ್ತಿದ್ದಾಗ ಕವರ್ ಮೇಲೆ ಮಹಾರಿ ಕಣ್ಣು ಬಿದ್ದಿದೆ. ಅದನ್ನು ಕ್ರಾಪ್ ಟಾಪ್ ಮಾಡಿದ್ರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ತಕ್ಷಣ ಕವರ್ ತೆಗೆದು ಬ್ಯಾಗ್ ಗೆ ಹಾಕಿದ್ದಾಳೆ. ಮನೆಗೆ ಬಂದು ಅದನ್ನು ಕ್ರಾಪ್ ಟಾಪ್ ಮಾಡಿ ಧರಿಸಿದ್ದಾಳೆ.
ಟಾಪ್ ಆಕರ್ಷಕ ಹಾಗೂ ಬೋಲ್ಡ್ ಆಗಿದೆ. ಅದ್ರ ಮೇಲೆ ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಸೀಟ್ ಖಾಲಿಬಿಡಿ ಎಂದು ಬರೆಯಲಾಗಿದೆ. ಈ ಫೋಟೋ ವೈರಲ್ ಆಗುವ ಜೊತೆಗೆ ಮಹಾರಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಯುಕೆ ರೈಲ್ವೆ ಇಲಾಖೆ ಕಣ್ಣು ಫೋಟೋ ಮೇಲೆ ಬೀಳ್ತಿದ್ದಂತೆ ಮಹಾರಿ ಫೋಟೋ ಡಿಲೀಟ್ ಮಾಡಿದ್ದಾಳೆ.