ವಾಹನಗಳನ್ನ ಯು ಟರ್ನ್ ಮಾಡಬೇಕಾದರೆ ಸ್ವಲ್ವ ಹೆಚ್ಚಿನ ಜಾಗವೇ ಬೇಕಾಗುತ್ತೆ. ಇದೇ ರೀತಿ ತನ್ನ ಟ್ರ್ಯಾಕ್ಟರ್ನ್ನು ಟರ್ನ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಾರಿಗೆ ಅಡ್ಡಲಾದ ಕಲ್ಲನ್ನ ಸರಿಸಿದ್ದಾನೆ. ವಿಷಯ ಇಷ್ಟೇ ಆಗಿದ್ದರೆ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ವಿಚಾರವೇ ಅಲ್ಲ. ಆದರೆ ಈತ ಸರಿಸಿದ್ದ ಕಲ್ಲು ಬೆಲ್ಜಿಯಂ ಹಾಗೂ ಫ್ರಾನ್ಸ್ ನಡುವಿನ ಅಂತಾರಾಷ್ಟ್ರೀಯ ಗಡಿಯ ಕಲ್ಲಾಗಿತ್ತು.
ಅಂತಾರಾಷ್ಟ್ರೀಯ ಗಡಿಯ ಗುರುತನ್ನ ಈ ರೈತ ಕೆಲ ಮೀಟರ್ಗಳವರೆಗೆ ತಿರುಗಿಸಿದ್ದಾನೆ. ಫ್ರಾನ್ಸ್ ಹಾಗೂ ಬೆಲ್ಜಿಯಂ ನಡುವಿನ ಗುರುತಿನ ಕಲ್ಲನ್ನ ರೈತ ತಿರುಗಿಸಿದ್ದರ ಪರಿಣಾಮ ಫ್ರಾನ್ಸ್ನ ಭೂ ಪ್ರದೇಶವು ಸುಮಾರು 2.25 ಮೀಟರ್ಗಳವರೆಗೆ ಕುಗ್ಗಿದೆ.
ರೈತರಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ಖಾತೆ ಸೇರಲಿದೆ 2000 ರೂ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ತನ್ನ ಟ್ರ್ಯಾಕ್ಟರ್ಗೆ ಅಡ್ಡಲಾಗಿದೆ ಎಂಬ ಕಾರಣಕ್ಕೆ ಈ ಕಲ್ಲಿನ ಜಾಗವನ್ನ ಬದಲಾಯಿಸಿದ್ದಾನೆ. ಸ್ಥಳೀಯ ಇತಿಹಾಸಕಾರರು ಗುರುತಿನ ಕಲ್ಲಿನ ಸ್ಥಾನ ಪಲ್ಲಟವನ್ನ ಗಮನಿಸುವವರೆಗೂ ಈ ವಿಚಾರ ಬೆಳಕಿಗೆ ಬಂದಿರಲಿಲ್ಲ. ಹಳೆಯ ನಕ್ಷೆಯನ್ನ ತೆಗೆದು ನೋಡಿದ ಬಳಿಕ ಕಲ್ಲು ಸ್ಥಾನ ಪಲ್ಲಟವಾಗಿರೋದು ಇತಿಹಾಸಕಾರರ ಗಮನಕ್ಕೆ ಬಂದಿದೆ.