ಬ್ರಿಟನ್ನಲ್ಲಿ ಮಕ್ಕಳಿಗೆಂದೇ ನಿರ್ಮಾಣ ಮಾಡಲಾದ ಫಾರಂ ಒಂದರಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಡುಗಳನ್ನ ಮರದ ಬಾಕ್ಸಿನಲ್ಲಿ ಇಡಲಾಗಿದ್ದು ಇದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಫಾರಂನಿಂದ ಕ್ಲಿಕ್ಕಿಸಲಾದ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧವನ್ನ ಎದುರಿಸುತ್ತಿದೆ. ಸ್ಟೆಫೋರ್ಡ್ಶೈರ್ ಎಂಬಲ್ಲಿರುವ ಚರ್ಚ್ ಫಾರಂನಲ್ಲಿ ಮರದ ಬಾಕ್ಸಿನೊಳಕ್ಕೆ ಇಡಲಾದ ಆಡುಗಳನ್ನ ಮಕ್ಕಳು ಮುದ್ದಿಸುತ್ತಿರುವ ಫೋಟೋವನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿತ್ತು.
ಇದು ಆಡುಗಳ ಜೊತೆ ಆಟವಾಡುವ ಸಮಯ..! ಅರ್ಧ ಗಂಟೆಗಳ ಸಮಯದಲ್ಲಿ ನಮ್ಮ ಫಾರಂನ ಹೊಸ ಸೇರ್ಪಡೆಗಳ ಜೊತೆ ಮಜಾ ಮಾಡಿ ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿತ್ತು.
ಆಟವಾಡಿ, ತಿನ್ನಿಸಿ ಹಾಗೂ ಆಡುಗಳನ್ನ ಮುದ್ದಾಡಿ, ಇದು ಮಾತ್ರವಲ್ಲದೇ ಆಡುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಿ. ಇದಕ್ಕಾಗಿ ನೀವು ವೆಬ್ಸೈಟ್ನಲ್ಲಿ ಬುಕ್ಕಿಂಗ್ ಮಾಡಿ ಎಂದು ಬರೆಯಲಾಗಿತ್ತು.
ಆದರೆ ನೆಟ್ಟಿಗರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಪೋಸ್ಟ್ನ್ನು ಡಿಲೀಟ್ ಮಾಡಲಾಗಿದೆ. ಅನೇಕರು ಈ ರೀತಿ ಪ್ರಾಣಿಗೆ ಹಿಂಸೆ ನೀಡುವ ಸ್ಥಳದಲ್ಲಿ ಮಕ್ಕಳಿಗೆ ಏನನ್ನು ಕಲಿಸುತ್ತೀರಿ ಎಂದು ಪೋಷಕರನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಅನೇಕರು ಈ ಸ್ಥಳಕ್ಕೆ ನಾವೆಂದಿಗೂ ಭೇಟಿ ನೀಡೋದಿಲ್ಲ ಅಂತಾ ಆಕ್ರೋಶ ಹೊರಹಾಕಿದ್ದಾರೆ.