ಬ್ಯಾಂಕಾಕ್: ಹೋಟೆಲ್ ನಿಂದ ತರಿಸಿದ ಮೀನಿನ ತಿನಿಸಿನ ಬಾಕ್ಸ್ ನಲ್ಲಿ ಹೊಳೆಯುವ ಮೀನು ಕಂಡು ಕುಟುಂಬ ದಂಗಾಗಿದೆ. ಕೇಂದ್ರೀಯ ಥೈಲ್ಯಾಂಡ್ ನ 58 ವರ್ಷದ ಅರೋನ್ ಯೋಲ್ಪೈಬೋನ್ ಎಂಬಾಕೆ ಹಾಗೂ ಆಕೆಯ 21 ವರ್ಷದ ಪುತ್ರ ನತ್ತಾನೈ ಕಂಚನವಸ್ ರಾತ್ರಿ ಊಟಕ್ಕೆ 3 ಬಾಕ್ಸ್ ಮೀನಿನ ತಿನಿಸು ತರಿಸಿದ್ದರು.
ಅದರಲ್ಲಿದ್ದ ಸೀಗಡಿ ಮೀನಿನ ತುಂಡುಗಳು ನೀಲಿ ಲೈಟ್ ನಂತೆ ಹೊಳೆಯುತ್ತಿದ್ದವು. ಇದರಿಂದ ಅಚ್ಚರಿಗೊಂಡ ಅವರು ಅದನ್ನು ವಿಡಿಯೋ ಮಾಡಿದ್ದಾರೆ.
ಆದರೆ, ಅವುಗಳನ್ನು ಹಾಗೆಯೇ ಬಿಡದೆ ಮೀನನ್ನು ತಿಂದು ಹಾಕಿದ್ದಾರೆ. ಅದು ಬೇಯಿಸಿದ್ದರಿಂದ ನನಗೆ ಯಾವುದೇ ತೊಂದರೆಯಾಗಿಲ್ಲ ಎಂದು ನತ್ತಾನೈ ಹೇಳಿಕೊಂಡಿದ್ದಾರೆ.
“ಸಮುದ್ರಜೀವಿಗಳು ಹೊಳೆಯುವ ಅಥವಾ ಪ್ರತಿದೀಪಕ ಬ್ಯಾಕ್ಟೀರಿಯಾದಿಂದ ಕಲುಷಿತವಾದಲ್ಲಿ ಈ ರೀತಿ ಆಗುತ್ತವೆ. ಅದನ್ನು ತಿನ್ನುವುದು ಅಪಾಯಕಾರಿ. ಬೇಯಿಸಿದಲ್ಲಿ ಸಾಯುತ್ತವೆ. ಆದರೆ, ಇಲ್ಲಿ ಆಹಾರವನ್ನು ಸರಿಯಾಗಿ ಬೇಯಿಸಿರಲಿಕ್ಕಿಲ್ಲ. ಇದರಿಂದ ಹೊಳೆಯುತ್ತಿರಬಹುದು” ಎಂದು ಚುಲಾಲೊಂಗ್ ಕೊರ್ನ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಜೇಸದ್ ಡೆಂಗ್ಯುಂಗ್ ಬೊರಿಪಂತ್ ಅಭಿಪ್ರಾಯಪಟ್ಟಿದ್ದಾರೆ.
https://www.youtube.com/watch?v=BhovTc_f_zY&feature=emb_logo