ಕ್ರಿಸ್ಮಸ್ ಹಬ್ಬ ಬಂತು ಅಂದರೆ ಸಾಕು ಕ್ರಿಶ್ಚಿಯನ್ ಬಾಂಧವರು ಉಡುಗೊರೆಗಳನ್ನ ತಮ್ಮ ಪ್ರೀತಿಪಾತ್ರರಿಗೆ ಕೊಡುವ ಹಾಗೂ ತೆಗೆದುಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿ ಹೋಗ್ತಾರೆ.
ಉಡುಗೊರೆ ಇಂತದ್ದೇ ಅಗಬೇಕು ಎಂದೇನಿಲ್ಲ. ಆಟಿಕೆ ಸಾಮಗ್ರಿ, ಬಟ್ಟೆ, ಅಲಂಕಾರಿಕ ವಸ್ತುಗಳು ಹೀಗೆ ಪಟ್ಟಿ ಬೆಳೀತಾನೇ ಹೊಗುತ್ತೆ. ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾಗುವ ವಸ್ತುಗಳನ್ನ ನೀಡೋದೇ ಒಂದು ಸಂಭ್ರಮ.
ಆದರೆ ಎಲ್ಲರೂ ಕ್ರಿಸ್ಮಸ್ ಹಬ್ಬವನ್ನ ಹೀಗೆ ಮಜಾ ಮಾಡೋಕೆ ಆಗಲ್ಲ. ಬಡತನ ಅದರಲ್ಲೂ ಕೋವಿಡ್ನಿಂದಾಗಿ ಎಷ್ಟೋ ಜನಕ್ಕೆ ಹೊತ್ತು ಊಟ ಸಿಗೋದೇ ಕಷ್ಟ ಎಂಬತಾಗಿದೆ.
ಇಂತವರಿಗೆ ಉಡುಗೊರೆಯನ್ನ ಕೊಟ್ಟರೆ ಬಹುಶಃ ಈ ಬಾರಿಯ ಕ್ರಿಸ್ಮಸ್ ಇನ್ನಷ್ಟು ಸ್ಪೆಶಲ್ ಎನಿಸಬಹುದು.
ಇದೇ ರೀತಿ ಯೋಚನೆ ಮಾಡಿದ ಅಮೆರಿಕದ ಕುಟುಂಬವೊಂದು ನಿರಾಶ್ರಿತರಿಗೆಂದೇ ಗಿಫ್ಟ್ಗಳನ್ನ ಸಂಗ್ರಹಿಸಿದೆ. ನಿಕ್ ಸ್ಮಿತ್ ಹಾಗೂ ಜೆಸ್ ದಂಪತಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸುಮಾರು 49,19,975.20 ರೂಪಾಯಿ ಮೌಲ್ಯದ ಉಡುಗೊರೆಗಳನ್ನ ಸಂಗ್ರಹಿಸಿ ನೀಡುವ ಮೂಲಕ ನಿರಾಶ್ರಿತರ ಮುಖದಲ್ಲಿ ನಗು ತರಿಸಿದ್ದಾರೆ.