ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಎರಡು ಸೂರ್ಯ ಕಾಣಿಸುತ್ತಿರುವ ಫೋಟೋ ಭಾರಿ ವೈರಲ್ ಆಗಿದ್ದು, ಈ ರೀತಿ ಕೆನಡಾದಲ್ಲಿ ಕಾಣಿಸಿದೆ ಎಂದು ಹೇಳಲಾಗಿತ್ತು.
ಆದರೆ ಸೂರ್ಯ ಕಾಣಿಸಲು ಸಾಧ್ಯವೇ ಎನ್ನುವ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೋ 2015 ರಲ್ಲಿದ್ದ ಫೋಟೋ ಅಂತೆ.
ಅಷ್ಟಕ್ಕೂ ಫೋಟೋದಲ್ಲಿ ಕಾಣಿಸುತ್ತಿರುವ ಇನ್ನೊಂದು ಸೂರ್ಯ, ಪ್ರತಿಬಿಂಬವಂತೆ. ಅಲ್ಲಿ -30 ಡಿಗ್ರಿ ಇದ್ದಿದ್ದರಿಂದ ಹಿಮಗಡ್ಡೆ ಕನ್ನಡಿಯ ರೀತಿ ಪ್ರತಿಬಿಂಬವನ್ನು ಹೊರಸೂಸಿದೆ. ಆದ್ದರಿಂದ ಎರಡು ಸೂರ್ಯನ ರೀತಿ ಕಾಣುತ್ತಿದೆ. ಕೆಲವೊಮ್ಮೆ ಇದು ಮೂರು ಸೂರ್ಯನ ರೀತಿಯೂ ಕಾಣುತ್ತವೆಯಂತೆ.