ಭಾರತೀಯರಿಗೆ ‘ಜುಗಡ್’ ಶಬ್ಧ ಚಿರಪರಿಚಿತ. ಯಾವುದೇ ಕಷ್ಟವಿಲ್ಲದೆ ಪಡೆದ ವಸ್ತುಗಳನ್ನು ಜುಗಾಡ್ ಎಂದು ಕರೆಯುತ್ತಾರೆ. ಕೆಲವರು ತಮ್ಮ ಕ್ರಿಯಾಶೀಲತೆಯ ಮೂಲಕ ಕೆಲವು ವಸ್ತುಗಳನ್ನು ತಮಗೆ ಅನುಕೂಲಕರವಾಗಿ ಬದಲಿಸುತ್ತಾರೆ.
ಅದಕ್ಕೆ ಈ ಜುಗಾಡ್ ಎಂದು ಕರೆಯುವುದಿದೆ. ಇಂಥ ತಂತ್ರಜ್ಞರ ಇಂಥ ಶುದ್ಧ ದೇಶೀ ತಂತ್ರಜ್ಞಾನಗಳು ಜಾಲತಾಣಗಳಲ್ಲಿ ಆಗಾಗ ಮಿಂಚುತ್ತವೆ. ಇಂಥ ಪ್ರತಿಭೆಗಳು ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆ ಇದ್ದಾರೆ. ಅವರು ತಮ್ಮ ಕ್ರಿಯಾಶೀಲತೆಯ ಮೂಲಕ ಅಚ್ಚರಿ ಮೂಡಿಸುತ್ತಾರೆ. ಕೆಲವು ಬಾರಿ ನಗೆಪಾಟಲಿಗೂ ಒಳಗಾಗುತ್ತಾರೆ.
ಇತ್ತೀಚೆಗೆ ಸಿಸಿಟಿವಿ ಈಡಿಯಟ್ಸ್ ಎಂಬ ಟ್ವಿಟರ್ ಖಾತೆಯಿಂದ ಶೇರ್ ಆಗಿರುವ ವಿಡಿಯೋವೊಂದು ಈ ಮೇಲಿನ ವಿವರಣೆಗೆ ಸಾಕ್ಷಿಯಾಗಿದೆ. ಪ್ರಸಿದ್ಧ ಬಾಲಿವುಡ್ ಚಿತ್ರ ‘ಧೂಮ್’ನಲ್ಲಿ ಬಳಸಿದಂಥದ್ದೇ ಬೈಕ್ ನಲ್ಲಿ ವ್ಯಕ್ತಿಯೊಬ್ಬ ಸ್ಟೈಲಿಶ್ ಅಗಿ ತೆರಳುತ್ತಿದ್ದಾನೆ. ಆದರೆ, ಹಿಂದಿನಿಂದ ನೋಡಿದರೆ, ಆತ ಓಡಿಸುತ್ತಿರುವುದು ಸೈಕಲ್. ಅಂದರೆ, ಎದುರಿಗೆ ಮಾತ್ರ ಬೈಕ್ನ ಡೂಮ್, ಟಯರ್, ಟಯರ್ಗಾರ್ಡ್ ಗಳನ್ನು ಹಾಕಿ ಬೈಕ್ ನಂತೆ ಶೃಂಗಾರ ಮಾಡಲಾಗಿದೆ.
ಚೀನಿ ಹಾಡಿನೊಂದಿಗೆ ಇರುವ ವಿಡಿಯೋವನ್ನು ನೋಡಿ ನೆಟ್ಟಿಗರು ಮನ ಸೋತಿದ್ದಾರೆ. “ಫೇಕ್ ಇಟ್ ಟಿಲ್ ಯು ಮೇಕ್ ಇಟ್” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು “ಕಬಾಡ್ ಸೆ ಜುಗಾಡ್” ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/cctv_idiots/status/1281924755604541441?ref_src=twsrc%5Etfw%7Ctwcamp%5Etweetembed%7Ctwterm%5E1281924755604541441%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ffake-it-till-you-make-it-this-mans-jugaadu-motorcycle-has-amused-netizens-watch%2F620218