alex Certify ಸ್ಯಾನಿಟರಿ ಪ್ಯಾಡ್​ ಕೊರತೆಯಿಂದಾಗಿ ಥಾಯ್ಲೆಂಡ್ ಮಹಿಳಾ ಕೈದಿಗಳ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಯಾನಿಟರಿ ಪ್ಯಾಡ್​ ಕೊರತೆಯಿಂದಾಗಿ ಥಾಯ್ಲೆಂಡ್ ಮಹಿಳಾ ಕೈದಿಗಳ ಪರದಾಟ

ಥಾಯ್​ ಜೈಲಿನಲ್ಲಿದ್ದ ಮಹಿಳಾ ಕೈದಿಗೆ ಸ್ಯಾನಿಟರಿ ಪ್ಯಾಡ್​ ಸಿಗದ ಕಾರಣ ಪರದಾಡಿದ್ದಾಳೆ. ಆಕೆಯ ಸಮವಸ್ತ್ರ ಹಾಗೂ ಕೊಠಡಿಯೆಲ್ಲ ರಕ್ತಸ್ರಾವದಿಂದ ಗಲೀಜಾಗಿದೆ.

ತನಗೆ ಮುಟ್ಟಾದ ದಿನದ ಮುಂಜಾನೆಯೇ ಕೈದಿ ಜೈಲಾಧಿಕಾರಿಗಳಿಗೆ ಹೆಚ್ಚುವರಿ ಸ್ಯಾನಿಟರಿ ಪ್ಯಾಡ್​ ನೀಡುವಂತೆ ಮನವಿ ಮಾಡಿದ್ದರು. ಆದರೆ ಇಷ್ಟಕ್ಕೆ ಸಿಟ್ಟು ಮಾಡಿಕೊಂಡ ಜೈಲಾಧಿಕಾರಿ ತನ್ನ ಬಳಿ ಪ್ಯಾಡ್​ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳಾ ಕೈದಿ ಅಸಹಾಯಕತೆಯಿಂದ ಕಣ್ಣೀರಾಗಿದ್ದಾರೆ.

ಇದು ಇದೊಂದು ಮಹಿಳಾ ಕೈದಿಯ ಕತೆಯಲ್ಲ. ಥೈಲಾಂಡ್​ನ ಬಹುತೇಕ ಜೈಲುಗಳಲ್ಲಿ ಮಹಿಳಾ ಕೈದಿಗಳು ಮುಟ್ಟಾದ ಸಂದರ್ಭದಲ್ಲಿ ಸ್ಯಾನಿಟರಿ ಪ್ಯಾಡ್​ ಕೊರತೆಯಿಂದ ಬಳಲುತ್ತಿದ್ದಾರೆ.

ಕಳೆದ ವರ್ಷ 2100 ಕೈದಿಗಳನ್ನ ಹೊಂದಿರುವ ಚೈಯಾಫುಂ ಜೈಲಿನಲ್ಲಿರುವ ಪ್ರತಿ ಮಹಿಳಾ ಕೈದಿಗೆ 12 ಸ್ಯಾನಿಟರಿ ಪ್ಯಾಡ್​ಗಳನ್ನ ದೊರಕಿವೆ. ಥಾಯ್​ ಕಾನೂನಿನ ಪ್ರಕಾರ ಎಲ್ಲಾ ಕಾರಾಗೃಹಗಳಲ್ಲಿ ಮಹಿಳಾ ಕೈದಿಗಳಿಗೆ ಸ್ಯಾನಿಟರಿ ಪ್ಯಾಡ್​ಗಳನ್ನ ಉಚಿತವಾಗಿ ನೀಡಬೇಕು ಎಂದು ಹೇಳಲಾಗಿದೆ.

ಆದರೆ ಕೆಲ ಕಾರಾಗೃಹಗಳಲ್ಲಿ ಬಜೆಟ್​ ಕೊರತೆಯಿಂದಾಗಿ ಈ ರೀತಿ ಸ್ಯಾನಿಟರಿ ಪ್ಯಾಡ್​​ಗಳ ಸಮಸ್ಯೆ ಉಂಟಾಗುತ್ತಿದೆ. ಥಾಯ್​ಲೆಂಡ್​ನಲ್ಲಿ ಡ್ರಗ್​ ಪ್ರಕರಣದಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕೈದಿಗಳು ಸೆರೆವಾಸ ಅನುಭವಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...