ಟಿಕ್ ಟಾಕ್ ಭಾರತದಲ್ಲಿ ನಿಷೇಧಿಸ್ಪಟ್ಟಿದೆ. ಇದ್ರಿಂದ ಅನೇಕರು ನಿರಾಶೆಗೊಂಡಿದ್ದಾರೆ. ಟಿಕ್ ಟಾಕ್ ಇಲ್ಲದ ಬೇಸರ ತುಂಬಲು ಫೇಸ್ಬುಕ್ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ.
ಟಿಕ್ ಟಾಕ್ ನಿಷೇಧಿಸಿದ ಸ್ವಲ್ಪ ಸಮಯದ ನಂತರ, ಟಿಕ್ ಟಾಕ್ ಹೋಲುವ ವೀಡಿಯೊ ಫೀಚರ್ ಕಂಪನಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ.
ವರದಿ ಪ್ರಕಾರ, ಟಿಕ್ ಟಾಕ್ ಬಳಕೆದಾರರಿಗೆ ರೀಲ್ಸ್ ಗೆ ಬರಲು ಫೇಸ್‌ಬುಕ್ ಹಣವನ್ನು ನೀಡುತ್ತಿದೆ, ಅವರ ಟಿಕ್ ಟಾಕ್ ಅನುಯಾಯಿಗಳು ತುಂಬಾ ಹೆಚ್ಚು.
ವರದಿಯ ಪ್ರಕಾರ, ಟಿಕ್ ಟಾಕ್ ಬಳಕೆದಾರರಿಗೆ ರೀಲ್ಸ್ ಬಳಸುವಂತೆ ಸಲಹೆ ನೀಡಿದೆ. ರೀಲ್ಸ್ ಗೆ ಬರಲು ಹಣವನ್ನು ಆಫರ್ ಮಾಡ್ತಿದೆ. ಹೆಚ್ಚು ಫಾಲೋವರ್ಸ್ ಹೊಂದಿದ್ದ ಟಿಕ್ ಟಾಕ್ ಬಳಕೆದಾರರನ್ನು ಫೇಸ್ಬುಕ್ ಸಂಪರ್ಕಿಸುತ್ತಿದೆ.
ಟಿಕ್ ಟಾಕ್ ನಲ್ಲಿ ಜನಪ್ರಿಯವಾಗಿದ್ದವರಿಗೆ ಲಕ್ಷಾಂತರ ರೂಪಾಯಿ ನೀಡಲು ಫೇಸ್ಬುಕ್ ಮುಂದಾಗಿದೆ ಎನ್ನಲಾಗ್ತಿದೆ. ಟಿಕ್ ಟಾಕ್ ಭಾರತದಲ್ಲಿ ನಿಷೇಧಿಸಲ್ಪಟ್ಟದ್ದು, ಈಗ ಈ ಅಪ್ಲಿಕೇಶನ್ ಅಮೆರಿಕದಲ್ಲಿಯೂ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ.