ತನ್ನ ನಿಯಮಾವಳಿಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಈರುಳ್ಳಿ ಬೀಜದ ಜಾಹೀರಾತೊಂದನ್ನು ಫೇಸ್ಬುಕ್ ಬ್ಲಾಕ್ ಮಾಡಿದೆ. ಕೆನಡಾದ ನ್ಯೂಫಾಂಡ್ಲಾಂಡ್‌ನ EW ಗೇಝ್ ಹೆಸರಿನ ಬೀಜ ಕಂಪನಿಯು ತಾನು ಮಾರಾಟ ಮಾಡುವ ಈರುಳ್ಳಿ ಬೀಜಗಳ ಮೇಲೆ ವಿಶೇಷ ಆಫರ್ ಒಂದನ್ನು ಕೊಡುವುದಾಗಿ ಜಾಹೀರಾತು ಹಾಕಿತ್ತು. ಬುಟ್ಟಿ ತುಂಬಾ ಈರುಳ್ಳಿ ಇರುವ ಈ ಜಾಹೀರಾತನ್ನು ’ವಿಪರೀತ ಲೈಂಗಿಕತೆ ಇರುವ’ ಚಿತ್ರವೆಂದು ಬ್ಲಾಕ್ ಮಾಡಿದೆ ಫೇಸ್ಬುಕ್.
$1.99 ಬೆಲೆ ಬಾಳುವ ಈ ಉತ್ಪನ್ನವನ್ನು, “ಬಹಳ ಸಿಹಿ, ಮೆದು ಹಾಗೂ ದೊಡ್ಡ ಈರುಳ್ಳಿಯಾಗಿದ್ದು, ಬೀಜದಿಂದಲೇ ಬೆಳೆಯುವುದು ಬಹಳ ಸುಲಭ” ಎಂದು ಜಾಹೀರಾತಿನಲ್ಲಿ ವರ್ಣಿಸಲಾಗಿದೆ. ಫೇಸ್ಬುಕ್ ಕೊಟ್ಟಿರುವ ಈ ಕಾರಣ ನೆಟ್ಟಿಗರ ವಲಯದಲ್ಲಿ ಸಾಕಷ್ಟು ಫನ್ನಿ ಪ್ರತಿಕ್ರಿಯೆಗಳಿಗೆ ಗುರಿಯಾಗಿದೆ.
https://www.facebook.com/TheSeedCompanyNL/posts/2683168191946074