ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಕಾಂಗರೂಗಳನ್ನ ನೀವು ನೋಡೇ ಇರ್ತೀರಾ. ಆದರೆ ಎಂದಾದರೂ ಬಿಳಿ ಬಣ್ಣದ ಕಾಂಗರೂಗಳನ್ನ ಕಂಡಿದ್ದೀರಾ..? ನೀವೇನಾದರೂ ನ್ಯೂಯಾರ್ಕ್ನ ಆನಿಮಲ್ ಅಡ್ವೆಂಚರ್ ಪಾರ್ಕ್ಗೆ ಭೇಟಿ ನೀಡಿದ್ರೆ ಬಿಳಿ ಬಣ್ಣದ ಕಾಂಗರೂ ಮರಿ ನಿಮ್ಮ ಕಣ್ಣಿಗೆ ಬೀಳಲಿದೆ.
ಕಳೆದ ಕೆಲ ತಿಂಗಳ ಹಿಂದೆ ಈ ಅಪರೂಪದಲ್ಲಿ ಅಪರೂಪ ಬಣ್ಣದ ಕಾಂಗರೂ ಈ ಪಾರ್ಕಿನಲ್ಲಿ ಜನಿಸಿತ್ತು. ಆದರೆ ಈ ಮರಿ ಹೆಣ್ಣು ಕಾಂಗರೂನ ಚೀಲದಲ್ಲೇ ಇದ್ದ ಕಾರಣ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇದೀಗ ಸಿಬ್ಬಂದಿ ಪರಿಶೀಲನೆ ನಡೆಸಿದ ವೇಳೆ ಈ ಅಪರೂಪದ ಬಣ್ಣದ ಕಾಂಗರೂ ಕಣ್ಣಿಗೆ ಬಿದ್ದಿದೆ.
ಫೇಸ್ಬುಕ್ನಲ್ಲಿ ಕಾಂಗರೂ ಫೋಟೋ ಶೇರ್ ಮಾಡಿರುವ ಪಾರ್ಕ್, ಇದು ನಿಮ್ಮ ಸ್ಟಾಂಡರ್ಡ್ ಕೆಂಪು ಕಾಂಗರೂ ಅಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. ಕಾಂಗರೂಗಳು ಹುಟ್ಟುವಾಗ ಮನುಷ್ಯನ ಹೆಬ್ಬರಳಿನ ಗಾತ್ರದಲ್ಲಿ ಇರುತ್ತವೆ. ಆದರೆ ತಾಯಿಯ ಚೀಲದಲ್ಲಿ ಇವು ನಂತದ ಬೆಳವಣಿಗೆ ಕಾಣುತ್ತವೆ. ಮರಿ ಜನಿಸಿದ ನಾಲ್ಕರಿಂದ ಐದು ತಿಂಗಳುಗಳ ಕಾಲ ಮರಿಗಳು ತಾಯಿಯ ಚೀಲದಲ್ಲೇ ಇರುತ್ತವೆ. ಇದಾದ ಬಳಿಕ ಮರಿಗಳನ್ನ ತಾಯಿಯ ಚೀಲದಿಂದ ತೆಗೆದು ಮೃಗಾಲಯ ಸಿಬ್ಬಂದಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸ್ತಾರೆ.
ಸಾಮಾನ್ಯ ಕಾಂಗರೂಗೆ ಜನಿಸಿದ ಈ ಮರಿ ಬಿಳಿ ಬಣ್ಣದ ಚರ್ಮ ಹೊಂದಿದೆ ಎಂದು ಶುಕ್ರವಾರ ಮೃಗಾಲಯ ಮಾಹಿತಿ ನೀಡಿದೆ. ಇದು ಗಂಡು ಕಾಂಗರೂ ಆಗಿರಬಹುದೆಂದು ಮೃಗಾಲಯದ ಸಿಬ್ಬಂದಿ ಅಂದಾಜಿಸಿದ್ದಾರೆ.
https://www.facebook.com/AnimalAdventurePark/posts/3062159507220241