ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗ್ತಿದೆ. ಕೊರೊನಾದಿಂದ ಬಳಲುತ್ತಿರುವ ಬ್ರಿಟನ್ ನಲ್ಲಿ ಇದ್ರ ನಿಯಂತ್ರಣಕ್ಕೆ ತೆಗೆದುಕೊಂಡ ಹೊಸ ನಿಯಮ ಚರ್ಚೆಯಲ್ಲಿದೆ. ಮತ್ತೆ ಲಾಕ್ ಡೌನ್ ಆಗದಂತೆ ತಡೆಯಲು ಬ್ರಿಟನ್ ಸರ್ಕಾರ, ಪ್ರತಿ ಯುವಕರಿಗೆ ವಾರದಲ್ಲಿ ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದೆ.
ಕೊರೊನಾ ಪರೀಕ್ಷೆಗಳನ್ನು ತ್ವರಿತವಾಗಿ ಮಾಡುವ ಮೂಲಕ ಕೊರೊನಾ ಸೋಂಕಿತರನ್ನು ಬೇಗ ಪತ್ತೆ ಮಾಡಲು ಇದು ಸಹಾಯವಾಗುತ್ತದೆ ಎಂದು ಸರ್ಕಾರ ನಂಬಿದೆ. ಯುಕೆಯಲ್ಲಿ ಕೊರೊನಾ ವೈರಸ್ ಟ್ರ್ಯಾಕಿಂಗ್ ಸಿಸ್ಟಮ್ ನಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಪ್ರತಿ ಯುವಕರು ವಾರಕ್ಕೆ ಎರಡು ಬಾರಿಯಾದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗ ಬ್ರಿಟನ್ ಲಾಕ್‌ಡೌನ್‌ನಿಂದ ಮುಕ್ತವಾಗಬಹುದು. ಯಾವುದೇ ರೋಗಲಕ್ಷಣಗಳಿಲ್ಲದ ಸೋಂಕಿತ ಜನರನ್ನು ಈ ಪರೀಕ್ಷೆಯಿಂದ ಸುಲಭವಾಗಿ ಗುರುತಿಸಬಹುದು ಎಂದು ಆರೋಗ್ಯ ತಜ್ಞರು ನಂಬಿದ್ದಾರೆ.
ಬ್ರಿಟನ್‌ನಲ್ಲಿ ನಿರ್ಬಂಧಗಳು ಇನ್ನೂ ಆರು ತಿಂಗಳವರೆಗೆ ಮುಂದುವರೆಯಲಿದೆ. ಲಸಿಕೆ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದ್ದು,ನಇದು ಇನ್ನೂ ಅನೇಕ ದಿನಗಳ ಕಾಲ ಮುಂದುವರೆಯಲಿದೆ. ಇದು ಮಹತ್ವದ ಸಮಯವಾಗಿದ್ದು, ನಿರ್ಲಕ್ಷ್ಯ ಮಾಡಿದ್ರೆ ಭವಿಷ್ಯಕ್ಕೆ ಹೊಡೆತ ಬೀಳಲಿದೆ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಇಲಾಖೆ ವೈದ್ಯರು ಹೇಳಿದ್ದಾರೆ.