ಕೊರೋನಾ ಎರಡನೇ ಅಲೆ ಹೊಡೆತಕ್ಕೆ ಯುರೋಪ್ ದೇಶಗಳು ತತ್ತರಿಸಿವೆ. ಜನರ ನಿರ್ಲಕ್ಷ್ಯದ ಪರಿಣಾಮ ಇಳಿಕೆ ಹಾದಿಯಲ್ಲಿದ್ದ ಕೊರೋನಾ ಉಲ್ಬಣವಾಗಿದೆ.
ಸೋಂಕಿತರು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯುರೋಪ್ ನ ಅನೇಕ ದೇಶಗಳಲ್ಲಿ ಮತ್ತೆ ಲಾಕ್ ಡೌನ್ ಸೇರಿದಂತೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಇಂಗ್ಲೆಂಡ್ ನಲ್ಲಿ ಡಿಸೆಂಬರ್ 2 ರವರೆಗೆ ಪ್ರಧಾನಿ ಬೋರಿಸ್ ಜಾನ್ಸನ್ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ
ಬೆಲ್ಜಿಯಂ, ಆಸ್ಟ್ರಿಯಾ, ಗ್ರೀಸ್, ಪೋರ್ಚುಗಲ್ನಲ್ಲಿ ಲಾಕ್ಡೌನ್, ಕಠಿಣ ನಿಯಮ ಜಾರಿ ಮಾಡಲಾಗಿದೆ. ಇಟಲಿಯಲ್ಲಿ ಭಾಗಶಃ ಲಾಕ್ ಡೌನ್ ಜಾರಿ ಮಾಡಲಾಗಿದೆ. ಸ್ಪೇನ್ ನಲ್ಲಿ ನವೆಂಬರ್ 9 ರ ವರೆಗೆ ಲಾಕ್ಡೌನ್ ಜಾರಿಯಲ್ಲಿರುತ್ತದೆ.