alex Certify 12ರಿಂದ 15 ವಯಸ್ಸಿನವರಿಗೆ ಫೈಜರ್​ ಲಸಿಕೆ ನೀಡಲು​ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12ರಿಂದ 15 ವಯಸ್ಸಿನವರಿಗೆ ಫೈಜರ್​ ಲಸಿಕೆ ನೀಡಲು​ ಅನುಮತಿ

12 ರಿಂದ 15 ವಯಸ್ಸಿನ ಮಕ್ಕಳಲ್ಲಿ ಫೈಜರ್​ ಲಸಿಕೆಯನ್ನ ಬಳಕೆ ಮಾಡಲು ಯುರೋಪಿಯನ್​ ಕಮಿಷನ್​ ಅಧಿಕೃತ ಅನುಮತಿ ನೀಡಿದೆ. ಅಮೆರಿಕ ಹಾಗೂ ಕೆನಡಾದಲ್ಲೂ ಕೆಲ ದಿನಗಳ ಹಿಂದಷ್ಟೇ 12 ವರ್ಷದವರಿಗೆ ಫೈಜರ್​ ಲಸಿಕೆ ನೀಡಲು ಅನುಮತಿ ನೀಡಲಾಗಿತ್ತು.

12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್​ ಲಸಿಕೆಯನ್ನ ಬಳಕೆ ಮಾಡಲು ಯುರೋಪಿಯನ್​ ಮೆಡಿಕಲ್​ ಏಜೆನ್ಸಿ ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ಇದೀಗ ಯುರೋಪಿಯನ್​ ಕಮಿಷನ್​​ ಈ ನಿರ್ಧಾರ ಕೈಗೊಂಡಿದೆ. ಫೈಜರ್ ಲಸಿಕೆಯನ್ನ ಯುರೋಪ್​​ನಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ನೀಡಲಾಗ್ತಿದೆ.

ಕೊರೊನಾ ವೈರಸ್​​ನಿಂದ ರಕ್ಷಣೆ ಪಡೆಯಲು ಹಾಗೂ ಸಾಮಾನ್ಯ ಸ್ಥಿತಿಗೆ ಮರಳಬೇಕು ಎಂದು ಬಯಸುವ ಮಕ್ಕಳು, ಪೋಷಕರು ಹಾಗೂ ಕುಟುಂಬಗಳಿಗೆ ಇದು ನಿಜಕ್ಕೂ ಒಂದು ಸಂತಸದ ವಿಚಾರವಾಗಿದೆ ಎಂದು ಫೈಜರ್​ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್​ ಬೌರ್ಲಾ ಹೇಳಿದ್ದಾರೆ.

ಗುರುವಾರ ಜರ್ಮನಿ ಕೂಡ 12 ವರ್ಷದವರಿಗೆ ಜೂನ್​ 7ನೇ ತಾರೀಖಿನಿಂದ ಫೈಜರ್​ ಲಸಿಕೆ ನೀಡುವ ಅಭಿಯಾನ ಆರಂಭಿಸುತ್ತೇವೆ ಎಂದು ಹೇಳಿತ್ತು. ಅಲ್ಲದೇ ಇಟಲಿ ಕೂಡ ಕೊರೊನಾ ಲಸಿಕೆ ಅಭಿಯಾನವನ್ನ 12 ವರ್ಷದವರಿಗೂ ವಿಸ್ತರಿಸಲು ತಯಾರಿ ನಡೆಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...