
ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರೊಂದಿಗೆ ಮೃತರ ಸಂಖ್ಯೆಯೂ ಏರುತ್ತಿದೆ. ಅದರಲ್ಲೂ ವೃದ್ಧರಿಗೆ ಕೊರೊನಾತಂಕ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಇಥೋಪಿಯಾದ 114 ವರ್ಷದ ವೃದ್ಧನೊಬ್ಬ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ.
ಹೌದು, ಇಥೋಪಿಯಾದ 114 ವರ್ಷವೆಂದು ಹೇಳಿಕೊಂಡಿರುವ ತಿಲಹೂನ್ ವುಡ್‌ಮೇಕಲ್ ಎನ್ನುವ ವ್ಯಕ್ತಿ ಇದೀಗ ಗುಣಮುಖರಾಗಿರುವುದು. ಕುಟುಂಬ ಸದಸ್ಯರ ಪ್ರಕಾರ, ತಿಲಹೂನ್ ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಇದೀಗ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿದ್ದ ವೇಳೆ ಆಮ್ಲಜನಕ ಹಾಗೂ ಡಿಕ್ಸೋಮೆಥಾಸೋನ್ ಮಾತ್ರೆಗಳನ್ನು ನೀಡಲಾಗುತ್ತಿತ್ತು.
ವೃದ್ಧರ ಮೊಮ್ಮಗ ಮಾತನಾಡಿದ್ದು, ಅವರಿಗೆ 114 ವರ್ಷ ಎನ್ನುವುದಕ್ಕೆ ಯಾವುದೇ ಅಧಿಕೃತ ದಾಖಲೆಗಳು ನಮ್ಮ ಬಳಿ ಇಲ್ಲ. ಆದರೆ ನೂರನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯ ಫೋಟೋಗಳು ಮಾತ್ರ ನಮ್ಮ ಬಳಿಯಿವೆ. ಆದರೆ ತಾತ ಹುಷಾರಾಗಿ ಬಂದಿರುವುದು ಎಲ್ಲಕ್ಕಿಂತ ಖುಷಿಯ ಸಂಗತಿ ಎಂದಿದ್ದಾರೆ.