ಸೂರ್ಯಾಸ್ತ, ಸಮುದ್ರ, ಶುಭ್ರ ಆಕಾಶ ಹಾಗೂ ಖಾಲಿ ಬೋಟ್……ಮದುವೆ ಪ್ರಪೋಸಲ್ಗಳಿಗೆ ಇದಕ್ಕಿಂತ ರೊಮ್ಯಾಂಟಿಕ್ ಸೆಟ್ ಅಪ್ ಸಿಗಲು ಸಾಧ್ಯವಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಲ್ ಫ್ರೆಂಡ್ಗೆ ಪ್ರಪೋಸ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಮಂಡಿಯೂರಿ ಕುಳಿತು ತನ್ನ ಮನದನ್ನೆಯನ್ನು ನೋಡುತ್ತಾ ಮನದಾಳದ ಮಾತನ್ನು ಹೇಳಬೇಕು ಎನ್ನುವವರೆಗೂ ಎಲ್ಲವೂ ಸೂಕ್ತ ಎನಿಸುತ್ತದೆ.
ಮುಂದಿನ ಘಳಿಗೆಯಲ್ಲಿ ಬಂತು ನೋಡಿ ಟ್ವಿಸ್ಟ್…! ಆ ಉಂಗುರವನ್ನು ಆತ ಆ ಹುಡುಗಿಗೆ ತೊಡಿಸಲು ಮುಂದಾದಾಗ ಸ್ನೇಹಿತ ಉಂಗುರವನ್ನು ಆತನತ್ತ ಎಸೆದಿದ್ದಾನೆ. ಆ ಉಂಗುರವು ಆತನ ತಲೆ ಮೇಲಿಂದ ಸಮುದ್ರಕ್ಕೆ ಬಿದ್ದಿದೆ.