ಕೊರೊನಾ ಸಾಂಕ್ರಮಿಕ ಎಲ್ಲಾ ಕಡೆ ಹಬ್ಬುತ್ತಿರುವ ಭೀತಿಯ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುವ ಮಂದಿಯನ್ನು ಕಂಡಾಗೆಲ್ಲಾ ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಕೊಳ್ಳುತ್ತಿದೆ.
ಮುಖದ ಮಾಸ್ಕ್‌ಗಳು ಮೈಮೇಲಿನ ಬಟ್ಟೆಗಳಷ್ಟೇ ಅತ್ಯಗತ್ಯವಾಗಿಬಿಟ್ಟಿವೆ. ಮಾಸ್ಕ್ ಇಲ್ಲದ ಮಂದಿಯನ್ನು ವಿಚಿತ್ರ ಜೀವಿಗಳಂತೆ ನೋಡುವ ಪರಿಪಾಠ ಬಂದಿದ್ದು, ಎಲ್ಲರೂ ಸಹ ಮಾಸ್ಕ್ ಧಾರಣೆಯ ಮಹತ್ವ ಅರಿತಿದ್ದಾರೆ.
ಅಮೆರಿಕದ ಜಾರ್ಜಿಯಾದ ಸೂಪರ್ ಮಾರ್ಕೆಟ್ ಒಂದರಲ್ಲಿ ಮಹಿಳೆ ಹಾಗೂ ಆಕೆಯ ಪುಟಾಣಿ ಮಗು ಮಾಸ್ಕ್ ಹಾಕಿಕೊಳ್ಳದೇ ಶಾಪಿಂಗ್‌ಗೆ ಬಂದಿದ್ದನ್ನು ಗಮನಿಸಿದ ಸಹ ಶಾಪರ್ ಒಬ್ಬ, ‘I hope you die’ ಎಂದು ಅವರ ಮೇಲೆ ಕಿಡಿ ಕಾರಿಕೊಂಡಿದ್ದಾನೆ. ಅಷ್ಟರಮಟ್ಟಿಗೆ ಈ ಮಾಸ್ಕ್‌ನ ಟ್ರೆಂಡ್ ಎಲ್ಲೆಡೆ ವ್ಯಾಪಕವಾಗಿದೆ ಎಂದರೆ ಖಂಡಿತಾ ಅಚ್ಚರಿಯಿಲ್ಲ ಬಿಡಿ.
https://twitter.com/StonedCoder/status/1288299560192835586?ref_src=twsrc%5Etfw%7Ctwcamp%5Etweetembed%7Ctwterm%5E1288299560192835586%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fenraged-shopper-shouts-i-hope-you-die-at-woman-her-kids-for-not-wearing-masks-inside-supermarket-watch%2F631269