ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಅನಿವಾರ್ಯವಾಗಿದೆ. ಮನೆಯಲ್ಲಿದ್ದರೂ ಮಾಸ್ಕ್ ಧರಿಸಿ ಎಂಬ ಸಲಹೆಗಳೂ ಈಗ ಕೇಳಿ ಬರ್ತಿವೆ.ಈ ಮಾಸ್ಕ್ ವಿಕಲಾಂಗರಿಗೆ ಸಮಸ್ಯೆಯಾಗಿದೆ. ಕಿವಿ ಕೇಳದ ಜನರು ಎದುರಿರುವವರ ತುಟಿಯನ್ನು ನೋಡಿ ಮಾತನ್ನು ಅರ್ಥ ಮಾಡಿಕೊಳ್ತಾರೆ. ಆದ್ರೆ ಇಂಥವರಿಗೆ ಮಾಸ್ಕ್ ತೊಂದರೆ ನೀಡ್ತಿದೆ.
ಇಂಗ್ಲೆಂಡ್ ಮಹಿಳೆ ಅವ್ರ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದೆ. ಪಾರದರ್ಶಕ ಮಾಸ್ಕನ್ನು ಆಕೆ ತಯಾರಿಸಿದ್ದಾಳೆ. ಕಿವುಡ ಜನರಿಗೆ ಇದು ನೆರವಾಗಲಿದೆ. 45 ವರ್ಷದ ಕ್ಲೇರ್ ಕ್ರಾಸ್ ಇದನ್ನು ತಯಾರಿಸಿದ್ದಾಳೆ. ಪಬ್ ನಲ್ಲಿ ಕೆಲಸ ಮಾಡುವ ಕ್ಲೇರ್ ತನ್ನ ಕಿವಿ ಕೇಳದ ಸ್ನೇಹಿತರಿಗಾಗಿ ಪಾರದರ್ಶಕ ಮಾಸ್ಕ್ ತಯಾರಿಸಿದ್ದಾಳೆ.
ಈ ಮಾಸ್ಕ್ ಧರಿಸಿದ್ರೆ ಬಾಯಿ ಚಲನೆ ಸುಲಭವಾಗಿ ಗೊತ್ತಾಗುತ್ತದೆ. ಹಾಗಾಗಿ ಕಿವುಡರು ಕೂಡ ಬಾಯಿ ಚಲನೆ ನೋಡಿ ಮಾತನ್ನು ಅರ್ಥ ಮಾಡಿಕೊಳ್ಳಬಹುದು. ಕ್ಲೇರ್ ಕ್ರಾಸ್ ಳ ಮಾಸ್ಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.