ಗಂಟೆಗೆ 65 ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಬ್ರಿಟನ್ ನ ಇಂಜಿನಿಯರ್ ಒಬ್ಬರು ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ಗಾಲಿಗಳಿರುವ ಕಸದ ಬುಟ್ಟಿಯನ್ನು ಬಳಸಿದ ಆಂಡಿ ಜೆನ್ನಿಂಗ್ಸ್, ಅದನ್ನು ರೇಸಿಂಗ್ ಮೋಟರ್ ನಂತೆ ಬಳಸಿಕೊಂಡು, ಅದಕ್ಕೊಂದು ಮೋಟರ್ ಬೈಕ್ ಇಂಜಿನ್, ಗೇರ್ ಬಾಕ್ಸ್, ನೀಟ್ ಹಾಗೂ ಸ್ಟಿಯರಿಂಗ್ ಅಳವಡಿಸಿ ವ್ಹೀಲಿಂಗ್ ಮಾಡಿದ್ದಾರೆ. ಕಸದ ಬುಟ್ಟಿಯಲ್ಲಿ ಇದ್ದುಕೊಂಡೇ 60 km/hrಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ಮೂಲಕ ಗಿನ್ನಿಸ್ ದಾಖಲೆ ಸೇರಿದ್ದಾರೆ ಆಂಡಿ.
ಇಲ್ಲಿನ ಎಲ್ವಿಂಗ್ಟನ್ ವೈಮಾನಿಕ ನೆಲೆಯಲ್ಲಿ, ಸ್ಟ್ರೇಟ್‌ಲೈನರ್ಸ್ ಸಂಸ್ಥೆಯು ಆಯೋಜಿಸಿದ್ದ ರೇಸ್‌ನಲ್ಲಿ ಭಾಗಿಯಾದ ಆಂಡಿ, ನಿಗದಿ ಮಾಡಿದ್ದ ಟಾರ್ಗೆಟ್ ಆದ 30mph ಎದುರು 45.35mph ತಲುಪುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.