alex Certify ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ

Elephant in Thailand Has a Heartwarming Reunion With the Vet Who Treated Him 12 Years Ago

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಪತ್ತೆ ಮಾಡಿದ ಥಾಯ್ಲೆಂಡ್‌ನ ಕಾಡಾನೆಯೊಂದು ಅವರನ್ನು ಗುರುತು ಹಿಡಿದ ಘಟನೆಯೊಂದು ನೆಟ್ಟಿಗರ ಮನಗೆಲ್ಲುತ್ತಿದೆ.

ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ರನ್ನು ಗುರುತು ಹಿಡಿದ 31 ವರ್ಷದ ಈ ಆನೆ, ತನ್ನ ಸೊಂಡಿಲಿನಿಂದ ಮೈ ನೇವರಿಸಿ ಆತನನ್ನು ಮುದ್ದುಗರೆದಿದೆ. ಪ್ಲಾಯ್‌ ಥಾಂಗ್ ಹೆಸರಿನ ಈ ಆನೆ ತನ್ನದೇ ವಿಶಿಷ್ಟವಾದ ದನಿಯಲ್ಲಿ ಮಾತನಾಡುತ್ತಾ ವೈದ್ಯ ಮನೀಯನ್‌ನನ್ನು ಮುದ್ದುಗರೆಯುತ್ತಿರುವ ಹೃದಯಸ್ಪರ್ಶಿ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಕಾಡಿನಲ್ಲಿ ತಮ್ಮ ದೈನಂದಿನ ಕರ್ತವ್ಯದಲ್ಲಿದ್ದ ವೇಳೆ ವೈದ್ಯರೊಂದಿಗೆ ಗಜರಾಯ ಸಂಧಿಸಿದ್ದಾನೆ.

ಬೆಂಗಳೂರಿಂದ ಹೊರಟ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

2009ರಲ್ಲಿ ಹುಶಾರಿಲ್ಲದೇ ನರಳಾಡಿದ್ದ ಪ್ಲಾಯ್‌ ಥಾಂಗ್‌ ಜ್ವರ, ಹೊಟ್ಟೆ ನೋವು, ಮುಖ, ಹೊಟ್ಟೆ ಹಾಗೂ ಕತ್ತಿನಲ್ಲಿ ಊತದಿಂದ ನರಳುತ್ತಿದ್ದ. ಜೊತೆಯಲ್ಲಿ ಅನೀ ಮಿಯಾ, ನಿಸ್ತೇಜ ಕಾಲುಗಳು ಹಾಗೂ ಪ್ಯಾರಾಸಿಟಿಕ್ ಪರಿಸ್ಥಿತಿಯನ್ನು ಗಜರಾಯ ಎದುರಿಸುತ್ತಿದ್ದ.

ಆತನನ್ನು ಲಂಪಾಂಗ್‌ನಲ್ಲಿರುವ ಶುಶ್ರುಷಾ ಕೇಂದ್ರಕ್ಕೆ ಕರೆತಂದು ಸೂಕ್ತ ಚಿಕಿತ್ಸೆ ಕೊಟ್ಟು, ವನ್ಯಜೀವಿ ಇಲಾಖೆಯ ಸಿಬ್ಬಂದಿಯ ಆರೈಕೆಯಲ್ಲಿ ಚೇತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಬಹಳ ದಿನಗಳ ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಪ್ಲಾಯ್‌ನನ್ನು ಮತ್ತೆ ಕಾಡಿಗೆ ಬಿಟ್ಟು ಬರಲಾಯಿತು.

ಆನೆ ಥಾಯ್ಲೆಂಡ್‌ನ ರಾಷ್ಟ್ರಪ್ರಾಣಿ. ಈ ದೇಶದಲ್ಲಿ 3000 – 4000 ಆನೆಗಳು ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...