ಕೋವಿಡ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾದ ಉದಾಹರಣೆಗಳಿವೆ. ಇಲ್ಲೊಂದು ಪ್ರಕರಣದಲ್ಲಿ ಕೊರೊನಾದಿಂದ ಚೇತರಿಸಿಕೊಂಡ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಸಿಬ್ಬಂದಿ ಅಪರಿಚಿತರ ಮನೆಯ ಹಾಸಿಗೆಯಲ್ಲಿ ಮಲಗಿಸಿ ಬಂದ ಪ್ರಸಂಗ ನಡೆದಿದೆ.
89 ವರ್ಷದ ಎಲಿಜಬೆತ್ ಮಹೋನಿ ಎಂಬಾಕೆ ಕೊರೋನಾದಿಂದಾಗಿ ಬಳಲಿ 10 ವಾರ ಪೊಂಟಿಪೂಲ್‌ನ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅದೃಷ್ಟವಶಾತ್ ಅವರು ವೈರಸ್‌ನಿಂದ ಚೇತರಿಸಿಕೊಂಡು ಮಾರ್ಚ್ 12 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಇಹಲೋಕ ತ್ಯಜಿಸಿದ ಅಮೆರಿಕಾದ ಅತಿ ʼಹಿರಿಯʼ ಮಹಿಳೆ
ಮನೆ ಮಂದಿಯೆಲ್ಲ ಆಕೆ ಮನೆಗೆ ಮರಳುವುದನ್ನು ಕಾಯುತ್ತಲಿದ್ದರು. ಎಷ್ಟು ಸಮಯವಾದರೂ ಆಸ್ಪತ್ರೆ ಸಿಬ್ಬಂದಿ ಮನೆಗೆ ಕರೆತಂದಿರಲಿಲ್ಲ. ಕೊನೆಗೆ ಕುಟುಂಬದವರು ಗಾಬರಿಗೊಂಡು ವಿಚಾರಿಸಿ ನೋಡಿದಾಗ, ಆಂಬ್ಯುಲೆನ್ಸ್ ಸಿಬ್ಬಂದಿ ವೃದ್ಧೆಯನ್ನು ಆಕೆಯ ಮನೆಯಿಂದ 12-13 ಕಿಲೋಮೀಟರ್ ದೂರದಲ್ಲಿರುವ ತಪ್ಪಾದ ವಿಳಾಸಕ್ಕೆ ಕರೆದೊಯ್ದು, ಅಪರಿಚಿತರ ಮನೆಯ ಹಾಸಿಗೆಯಲ್ಲಿ ಮಲಗಿಸಿರುವುದು ಗೊತ್ತಾಗಿದೆ. ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ತಪ್ಪಿನ ಅರಿವಾಗಿ, ಕ್ಷಮೆಯಾಚಿಸಿ ವಾಪಸು ಕರೆತಂದು ಬಿಟ್ಟಿದ್ದಾರೆ.