ವಿಶೇಷ ಸಮಾರಂಭಗಳಿಗೆ ಕ್ರಿಯೇಟಿವ್ ಥೀಮ್‌ಗಳ ಮೇಲೆ ಮಾಡುವ ಫೋಟೋಶೂಟ್‌ಗಳು ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಎಂಬಂತೆ ಆಗಿಬಿಟ್ಟಿವೆ. ಆದರೆ ಇವೆಲ್ಲಾ ಬಹುತೇಕ ಯುವಕರಿಗೇ ಮಾತ್ರ ಎಂಬಂತಾಗಿದೆ.
ಇಲ್ಲೊಬ್ಬ ಹಿರಿಯ ವ್ಯಕ್ತಿ ತಮ್ಮ 90ನೇ ಹುಟ್ಟುಹಬ್ಬದ ಆಚರಣೆಯ ವೇಳೆ ವಿಶೇಷವಾದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರರಾದ ಕರೆನ್ ಅಲೆಯಾ ತಮ್ಮ ತಂದೆಯ ಹುಟ್ಟುಹಬ್ಬದ ಫೋಟೋಶೂಟ್‌ನ ಚಿತ್ರಗಳನ್ನು ಆನ್ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.
“ಖುದ್ದು ತಾವೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲದೇ ಇದ್ದರೂ ಸಹ ನನ್ನ ತಂದೆಗೆ ತಮ್ಮ ಹುಟ್ಟುಹಬ್ಬದ ಫೋಟೋಶೂಟ್ ಮಾಡಿಸಿಕೊಂಡು ಪೋಸ್ಟ್ ಮಾಡಬೇಕೆಂಬ ಆಸೆ ಇತ್ತು” ಎಂದು ಅಲೆನ್ ತಿಳಿಸಿದ್ದಾರೆ.
ಕರೆನ್ ತಂದೆ ತಮ್ಮ ಮೆಚ್ಚಿನ ಪಿಯಾನೋ ಹಾಗೂ ಮುದ್ದಿನ ನಾಯಿ ಮರಿ ಡೆಲಿಯಾ ಜೊತೆಗೆ ಇರುವ ಮೂರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಅವರ ಸಂತಸದ ಮುಖಭಾವವನ್ನು ಕಂಡ ನೆಟ್ಟಿಗರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
https://twitter.com/KarenAlea/status/1339325479778738177?ref_src=twsrc%5Etfw%7Ctwcamp%5Etweetembed%7Ctwterm%5E1339325479778738177%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Felderly-mans-sweet-birthday-photoshoot-wins-the-internet-7111383%2F
https://twitter.com/KarenAlea/status/1339659114998337538?ref_src=twsrc%5Etfw%7Ctwcamp%5Etweetembed%7Ctwterm%5E1339735878059618305%7Ctwgr%5E%7Ctwcon%5Es2_&ref_url=https%3A%2F%2Findianexpress.com%2Farticle%2Ftrending%2Ftrending-globally%2Felderly-mans-sweet-birthday-photoshoot-wins-the-internet-7111383%2F