
ಕರಡಿಯೊಂದು ಯುವತಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.
ಅರಣ್ಯ ಅಧಿಕಾರಿ ಸುಶಾಂತ್ ನಂದ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿರುವಂತೆ ಯುವತಿ ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿರುವಾಗಲೇ ಕರಡಿ ಅತ್ತ ಆಗಮಿಸಿ ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತು ಕ್ಯಾಮೆರಾಗೆ ಫೋಸ್ ನೀಡುತ್ತದೆ. ಆಕೆ ಸಂತೋಷದಿಂದ ಫೋಟೋವನ್ನು ಕ್ಲಿಕ್ ಮಾಡುತ್ತಾಳೆ.
ಕರಡಿ ಹುಡುಗಿಯನ್ನು ಇಷ್ಟಪಡುತ್ತಿದಿಯೋ ಅಥವಾ ಸೆಲ್ಫಿಗೆ ಇಷ್ಟಪಡುತ್ತದೋ ಎಂಬ ಶೀರ್ಷಿಕೆ ಸಹ ವಿಡಿಯೋಗಿದೆ.