ಈಗಾಗಲೇ ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ ಇದೀಗ ಕೊರೊನಾ ಹಾಗೂ ಮಿಡತೆಗಳು ಎಗ್ಗಿಲ್ಲದೇ ಕಾಡುತ್ತಿದೆ. ಆದರೆ ಈ ಎರಡಕ್ಕೂ ಒಂದೇ ಪರಿಹಾರವನ್ನು ಪಾಕ್‌ನ ಸಂಸದರೊಬ್ಬರು ನೀಡಿದ್ದಾರೆ.
ಹೌದು, ಪಾಕಿಸ್ತಾನದ ಸಂಸದ ರಿಯಾಜ್ ಫತ್ಯಾನ್ ಈ ಮಾತನ್ನು ಸಂಸತ್‌ನಲ್ಲಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಕಾಡುತ್ತಿರುವ ಮಿಡತೆಗಳನ್ನು ತಿನ್ನುವುದರಿಂದ ಕೊರೊನಾದಿಂದ ಗುಣಮುಖರಾಗಬಹುದು. ಆದ್ದರಿಂದ ಜನರಿಗೆ ಮಿಡತೆ ತಿನ್ನಲು ಸರಕಾರ ಹೇಳಬೇಕು. ಈ ಮಿಡತೆಯಿಂದ ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಮಿಡತೆ ತಿನ್ನುವುದರಿಂದ, ಮಿಡತೆಗಳು ಕಡಿಮೆಯಾಗುವುದರೊಂದಿಗೆ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಪಾಕಿಸ್ತಾನದ ಎರಡು ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.
ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸುಮಾರು 50 ಸಾವಿರ ಮಂದಿ ವೀಕ್ಷಿಸಿದ್ದಾರೆ. ಒಬ್ಬರು ಪಾಕಿಸ್ತಾನ ಸಂಸತ್‌ನಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರೆ, ಇನ್ನೊಬ್ಬರು ಪಾಕ್ ಸಂಸತ್ ನಿಂದ ಮಾತ್ರ ಈ ರೀತಿ ಕಾಮಿಡಿ ಸಾಧ್ಯ ಎಂದಿದ್ದಾರೆ.