alex Certify Big News: ಇವರ ಮೇಲೆ ಹೆಚ್ಚು ಅಡ್ಡ ಪರಿಣಾಮ ಬೀರುತ್ತಿದೆ ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಇವರ ಮೇಲೆ ಹೆಚ್ಚು ಅಡ್ಡ ಪರಿಣಾಮ ಬೀರುತ್ತಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿನಕ್ಕೂ ಹೆಚ್ಚಾಗ್ತಿದೆ. ಏಪ್ರಿಲ್ ನಾಲ್ಕರಂದು ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಬಂದಿವೆ. ಒಂದು ಕಡೆ ಚಿಕಿತ್ಸೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಲಸಿಕೆ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ ಕೊರೊನಾ ಲಸಿಕೆ ಅನೇಕರಲ್ಲಿ ಅಡ್ಡಪರಿಣಾಮ ಬೀರಿದೆ. ಇದು ಕೊರೊನಾ ವೈರಸ್ ಲಸಿಕೆ ಬಗ್ಗೆ ಜನರಲ್ಲಿ ಭಯ ಹುಟ್ಟಲು ಕಾರಣವಾಗಿದೆ. ಕೊರೊನಾ ಲಸಿಕೆ ಯಾರಲ್ಲಿ ಅಡ್ಡಪರಿಣಾಮ ಹೆಚ್ಚು ಬೀರ್ತಿದೆ ಎನ್ನುವ ಬಗ್ಗೆ ಅನೇಕ ಅಧ್ಯಯನ ನಡೆದಿದೆ.

ಹೊಸ ಸಂಶೋಧನೆಯ ಪ್ರಕಾರ, ಪುರುಷರಿಗಿಂತ ಮಹಿಳೆಯರು ಕೊರೊನಾ ಲಸಿಕೆಯ ಅಡ್ಡಪರಿಣಾಮಗಳಿಗೆ ಹೆಚ್ಚು ಒಳಗಾಗುತ್ತಾರೆ. ಯು.ಎಸ್.ಸಿ.ಡಿ.ಸಿ. ವಿವಿಧ ವಯಸ್ಸಿನ 1 ಕೋಟಿ 37 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೀಡಲಾದ ಕೊರೊನಾ ಲಸಿಕೆ ಡೇಟಾವನ್ನು ಪರಿಶೀಲಿಸಿದೆ. ಲಸಿಕೆ ಪಡೆದ ಶೇಕಡಾ 79ರಷ್ಟು ಮಹಿಳೆಯರ ಮೇಲೆ ಅಡ್ಡ ಪರಿಣಾಮ ಕಂಡು ಬಂದಿದೆ.

ZOE COVID ಸಿಂಪ್ಟಮ್ ಸ್ಟಡಿ ಆ್ಯಪ್ ಪ್ರಕಾರ, ಕೊರೊನಾ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದ್ರೆ, ಈಗಾಗಲೇ ಕೊರೊನಾ ಸೋಂಕಿಗೆ ಒಳಗಾದವರ ಶೇಕಡಾ ಮೂರನೇ ಒಂದು ಭಾಗದಷ್ಟು ಜನರ ದೇಹದಲ್ಲಿ ಹೆಚ್ಚು ಅಡ್ಡ ಪರಿಣಾಮ ಕಂಡು ಬಂದಿದೆಯಂತೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​ಐಎಂಎಯ ಕೊಚ್ಚಿ ಶಾಖೆ ಕೂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದ ವರದಿ ಪ್ರಕಾರ, ಭಾರತದ ಯುವ ಜನರಲ್ಲಿ ಅಡ್ಡಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. 5,396 ಜನರ ಮೇಲೆ ಅಧ್ಯಯನ ನಡೆದಿದೆ. 20 ರಿಂದ 29 ವರ್ಷ ಮತ್ತು 80 ರಿಂದ 90 ವರ್ಷ ವಯಸ್ಸಿನವರ ಮೇಲೆ ಅಧ್ಯಯನ ನಡೆದಿದೆ. 20-29 ವಯಸ್ಸಿನ ಶೇಕಡಾ 81 ರಷ್ಟು ಜನರ ಮೇಲೆ ಲಸಿಕೆ ಅಡ್ಡಪರಿಣಾಮ ಬೀರಿದೆ.

ಲಸಿಕೆ ಹಾಕಿಕೊಂಡ ಜಾಗದಲ್ಲಿ ನೋವು, ಬಾವು ಕಾಣಿಸಿಕೊಂಡಿದೆ. ದಣಿವು, ತಲೆನೋವು, ಸ್ನಾಯ ನೋವು, ಜ್ವರ, ನಡುಕ, ವಾಕರಿಕೆಯಿಂದ ಬಳಲುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...