ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಪ್ರತಿ ವರ್ಷ ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿ ವಿವಾಹವಾಗುತ್ತಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ನೇಹಾ ಎಂಬ 14 ವರ್ಷದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಯುವತಿಯನ್ನು ಮತಾಂತರ ಮಾಡಿ 45 ವರ್ಷದ ವ್ಯಕ್ತಿಯ ಜತೆ ವಿವಾಹ ಮಾಡಲಾಗಿತ್ತು. ಆಕೆ ಈಗ ಇಬ್ಬರು ಮಕ್ಕಳ ತಾಯಿ. ಅಪ್ರಾಪ್ತೆಯನ್ನು ವಿವಾಹವಾದ ಆರೋಪದ ಮೇಲೆ ಆಕೆಯ ಪತಿಯನ್ನು ಈಗ ಬಂಧಿಸಲಾಗಿದೆ.
ಇತ್ತೀಚೆಗೆ ನೇಹಾ ಪಿಸ್ತೂಲ್ ನಿಂದ ಗುಂಡು ಹೊಡೆದುಕೊಳ್ಳಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದಿದ್ದರು. ಆಗ ಪೊಲೀಸರು ವಿಚಾರಣೆಗೆ ಮುಂದಾದಾಗ, ಅತ್ಯಂತ ಸಣ್ಣ ದನಿಯಲ್ಲಿ ಆಕೆ ತನ್ನ ದಾರುಣ ಕತೆ ಹೇಳಿಕೊಂಡಿದ್ದಾಳೆ. ವಿವಾಹದ ಸಲುವಾಗಿಯೇ ಪ್ರತಿ ವರ್ಷ ಕನಿಷ್ಠ 1 ಸಾವಿರ ಯುವತಿಯರನ್ನು ಮತಾಂತರ ಮಾಡಿ ಹಿಂಸೆ ನೀಡಲಾಗುತ್ತದೆ ಎಂದು ಆಕೆ ಹೇಳಿಕೊಂಡಿದ್ದಾಳೆ.