
ಕೊರೊನಾದಿಂದ ಮೃತರಾದ ಅನೇಕರ ಕತೆಗಳನ್ನ ಕೇಳಿ ಕಣ್ಣಂಚಲ್ಲಿ ನೀರು ಉಕ್ಕಿದ್ದೂ ಇದೆ. ವೀಲ್ಚೇರ್ ಮೇಲೆ ಕೂತ ಕೊರೊನಾ ರೋಗಿ ಕೊನೆಯ ಬಾರಿಗೆ ಸೂರ್ಯಾಸ್ತ ನೋಡಿದ್ದು, ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ತಾಯಿಗೆ ಆಸ್ಪತ್ರೆಯ ಕಿಟಕಿ ಬಳಿ ಬಂದು ಮಗ ಗುಡ್ ಬೈ ಹೇಳಿದ್ದು ಹೀಗೆ ಸಾಕಷ್ಟು ಘಟನೆಗಳನ್ನ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ.
ಇದೀಗ ಆಸ್ಟ್ರೇಲಿಯಾದಿಂದ ಇದೇ ತರಹ ಇನ್ನೊಂದು ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದು ಇದನ್ನ ನೋಡಿದ ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ.
ಕೊನೆಯ ಬಾರಿಗೆ ಸಮುದ್ರವನ್ನ ಕಣ್ಣಾರೆ ನೋಡಬೇಕೆಂದು ಆಸೆಪಟ್ಟ ರೋಗಿಗಳನ್ನ ಅವರು ಸಾಯೋಕೂ ಮುನ್ನ ಸಮುದ್ರದ ಬಳಿ ಕರೆತಂದ ದೃಶ್ಯ ಮನ ಮುಟ್ಟುವಂತಿದೆ. ನೇಲ್ ಕಿಂಗ್ ಎಂಬ ಫೋಟೊಗ್ರಾಫರ್ ಈ ದೃಶ್ಯವನ್ನ ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಬ್ರಿಸ್ಬೇನ್ನ ಸಮುದ್ರವೊಂದರಲ್ಲಿ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ರೋಗಿಗೆ ಕೊನೆಯ ಬಾರಿಗೆ ಸಮುದ್ರವನ್ನ ತೋರಿಸ್ತಾ ಇರೋದನ್ನ ಕಾಣಬಹುದಾಗಿದೆ.
ಈ ಫೋಟೋ ಶೇರ್ ಮಾಡಿರುವ ನೇಲ್ ಕಿಂಗ್, ಮುಂಚೂಣಿ ಕಾರ್ಯಕರ್ತರ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.