
ನ್ಯಾಯಾಧೀಶ ರಾಯ್ ಫಗ್ಯೂಸನ್ ಎಂಬವರು ಟೆಕ್ಸಾಸ್ನ 394ನೆ ಜ್ಯೂಡಿಷಿಯಲ್ ಜಿಲ್ಲಾ ಕೋರ್ಟ್ನ ವಿಚಾರಣೆಯೊಂದನ್ನ ಜೂಮ್ ಅಪ್ಲಿಕೇಶನ್ ಮೂಲಕ ನಡೆಸುತ್ತಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಕೌಂಟಿ ಅಟಾರ್ನಿ ರೋಡ್ ಪೋಂಟೋನ್ ಎಂಬವರು ಕಾಣಬೇಕಿದ್ದ ಜಾಗದಲ್ಲಿ ಬೆಕ್ಕೊಂದು ಕಂಡಿದೆ. ಇದನ್ನ ಗಮನಿಸಿದ ನ್ಯಾಯಾಧೀಶ ರಾಯ್, ನೀವು ವಿಡಿಯೋ ಸೆಟಿಂಗ್ಸ್ನಲ್ಲಿ ಫಿಲ್ಟರ್ ಆನ್ ಮಾಡಿದ್ದೀರಾ ಎಂದು ವಕೀಲರಿಗೆ ಹೇಳಿದ್ದಾರೆ. ಕೂಡಲೇ ವಕೀಲ ನಾನು ಇಲ್ಲಿ ಲೈವ್ನಲ್ಲೇ ಇದ್ದೇನೆ. ನಾನು ಬೆಕ್ಕಲ್ಲ ಎಂದು ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.