ದುಬೈನ ಸುಲ್ತಾನ ಶೇಖ್ ಮೊಹಮ್ಮದ್ ಅಲ್ ಮಕ್ತೌಮ್‌ನ ಆರನೆ ಮಡದಿಯಾದ ಯುವರಾಣಿ ಹಯಾ ತನ್ನ ಬ್ರಿಟಿಷ್ ಅಂಗರಕ್ಷಕನೊಂದಿಗೆ ಇಟ್ಟುಕೊಂಡಿದ್ದ ರಹಸ್ಯವಾದ ಸಂಬಂಧದ ಬಗ್ಗೆ ಆಚೆ ಮಾತನಾಡದಿರಲು ಆತನಿಗೆ 1.2 ದಶಲಕ್ಷ ಪೌಂಡ್ (12 ಕೋಟಿ ರೂ.ಗಳು) ನೀಡಿದ್ದ ಸುದ್ದಿ ಪ್ರಚಾರಕ್ಕ ಬಂದಿದೆ.
ತನ್ನ ಎರಡು ವರ್ಷಗಳ ಈ ಸಂಬಂಧವನ್ನು ಗುಟ್ಟಾಗಿ ಇಡಲು ಹಯಾ ಆತನಿಗೆ ಹೆಚ್ಚುವರಿಯಾಗಿ 12 ಸಾವಿರ ಪೌಂಡ್ ಮೌಲ್ಯದ ಕೈಗಡಿಯಾರ, ವಿಂಟೇಜ್ ಶಾಟ್‌ಗನ್ ಸೇರಿದಂತೆ ಅನೇಕ ದುಬಾರಿ ಉಡುಗೊರೆಗಳನ್ನು ಕೊಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಅಂಗರಕ್ಷಕ ರಸೆಲ್ ಫ್ಲವರ್ಸ್‌ಗೆ ಈ ದುಬಾರಿ ಉಡುಗೊರೆಗಳನ್ನು ಕೊಡುತ್ತಾ ಬಂದ ಹಯಾ ತಾನು ಹೋದಲ್ಲೆಲ್ಲಾ ಆತ ತನ್ನೊಂದಿಗೆ ಇರಬೇಕೆಂದು ತಾಕೀತು ಮಾಡಿದ್ದರು. ಸುಲ್ತಾನನ ವಿರುದ್ಧ ಲಂಡನ್ ಹೈಕೋರ್ಟ್‌ನಲ್ಲಿ ನ್ಯಾಯಾಂಗ ಸಮರ ಹೂಡಿದ್ದ ಹಯಾ, ತನ್ನಿಬ್ಬರು ಮಕ್ಕಳು ತನ್ನೊಂದಿಗೇ ಇರಬೇಕೆಂಬ ತಮ್ಮ ಕೋರಿಕೆಯನ್ನು ಹೈಕೋರ್ಟ್ ಮೂಲಕ ಡಿಕ್ರಿ ಮಾಡಿಸಿಕೊಂಡಿದ್ದಾರೆ.
37 ವರ್ಷದ ರಸೆಲ್‌ಗೆ ಮಡದಿ ಇದ್ದರೂ ಸಹ ಈ ಸಂಬಂಧ ಕಾರಣ ಆತನಿಗೆ ಪತ್ನಿ ವಿಚ್ಛೇದನ ನೀಡಿದ್ದಾರೆ. 46 ವರ್ಷದ ಹಯಾ ಜೊತೆಗೆ ಈ ಒಡನಾಟದ ಕಾರಣದಿಂದ ರಸೆಲ್ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕಳೆದುಕೊಂಡಿದ್ದಾರೆ.