ಭಾರೀ ಬೆಲೆ ಬಾಳುವ ಒಂಟೆಯೊಂದರ ಮರಿಯನ್ನು ಕದ್ದು ತನ್ನ ಗರ್ಲ್ಫ್ರೆಂಡ್ಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಎಮಿರೇಟ್ ಪೊಲೀಸರು ಬಂಧಿಸಿದ್ದಾರೆ.
ಒಂಟೆಯ ಮಾಲೀಕರು ತಮ್ಮ ಫಾರಂನಿಂದ ಮರಿ ಕಳುವಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಶೋಧ ಕಾರ್ಯಕ್ಕೆ ಇಳಿದ ದುಬಾಯ್ ಪೊಲೀಸರು ಭಾರೀ ಪ್ರಯತ್ನ ಪಟ್ಟರೂ ಏನೂ ಸುಳಿವು ಸಿಕ್ಕಿರಲಿಲ್ಲ. ಅನೇಕ ದಿನಗಳ ಬಳಿಕ ವ್ಯಕ್ತಿಯೊಬ್ಬರು ತಮ್ಮ ಫಾರಂನಲ್ಲಿ ಬೀಡಾಡಿ ಒಂಟೆಯೊಂದು ಬಂದಿದೆ ಎಂದು ಸಿಬ್ಬಂದಿಗೆ ದೂರು ಕೊಟ್ಟಿದ್ದರು.
ʼಟೈಮ್ʼ ಉದಯೋನ್ಮುಖ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಸೇರಿ ಆರು ಭಾರತೀಯರು
ಈ ಸಂಬಂಧ ತನಿಖೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಆತನನ್ನ ಹಿಡಿದು ವಿಚಾರಣೆಗೆ ಒಳಪಡಿಸಿದ ವೇಳೆ, ತನ್ನ ನೆರೆಹೊರೆಯ ಫಾರಂನಿಂದ ಅಪರೂಪದ ತಳಿಯ ಒಂಟೆಯೊಂದನ್ನು ಕದಿಯಲು ಯತ್ನಿಸಿ ಕೊನೆಗೆ ಅದರ ಮರಿಯನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಎಲ್ಲಿ ಸಿಕ್ಕಿಬಿಡುವೆನೋ ಎಂಬ ಭಯದಲ್ಲಿ ಆತ ತನ್ನ ಫಾರಂನಲ್ಲಿ ಒಂಟೆ ಮರಿ ಬಂದಿದೆ ಎಂದು ದೂರು ಕೊಟ್ಟಿದ್ದಾನೆ.
ಒಂಟೆ ಮರಿಯನ್ನು ಅದರ ವಾರಸುದಾರರಿಗೆ ಒಪ್ಪಿಸಿದ ಪೊಲೀಸರು, ಶಂಕಿತ ಹಾಗೂ ಆತನ ಗರ್ಲ್ಪ್ರೆಂಡ್ಅನ್ನು ಬಂಧಿಸಿದ್ದು, ಅವರ ಮೇಲೆ ಕಳ್ಳತನ ಹಾಗೂ ಸುಳ್ಳು ಹೇಳಿಕೆ ಕೊಟ್ಟ ಆರೋಪ ಹೊರಿಸಿದ್ದಾರೆ.