ತನ್ನ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿದೆ ಎಂದು ದೂರು ಕೊಟ್ಟ ದುಬೈ ಮೂಲದ ಮಹಿಳೆಯೊಬ್ಬರಿಗೆ ವಿಷಯ ಏನು ಎಂದು ತಿಳಿದ ಕೂಡಲೇ ಶಾಕ್ ಆಗಿದೆ. ತನ್ನ ಗರ್ಲ್ಫ್ರೆಂಡ್ನ ಟ್ರಾಫಿಕ್ ಫೈನ್ಗಳನ್ನು ಕಟ್ಟಲು ಖುದ್ದು ತನ್ನ ಪತಿಯೇ ಕಾರ್ಡ್ ಬಳಸಿರುವ ಸಂಗತಿ ಈಕೆಗೆ ತಿಳಿದುಬಂದಿದೆ.
ತನ್ನ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆದಿರುವ ನೋಟಿಫಿಕೇಶನ್ ಅನ್ನು ಈ ಮಹಿಳೆ ತಮ್ಮ ಮೊಬೈಲ್ನಲ್ಲಿ ಸ್ವೀಕರಿಸಿದ್ದಾರೆ. ತಮ್ಮ ಕ್ರೆಡಿಟ್ ಕಾರ್ಡ್ ಕಳುವಾಗಿದೆ ಎಂದುಕೊಂಡು ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡುವಂತೆ ಕೇಳಿಕೊಂಡ ಮಹಿಳೆ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ, ಈ ಮಹಿಳೆಯ ಕ್ರೆಡಿಟ್ ಕಾರ್ಡ್ ಬಳಸಿದ್ದ ಮತ್ತೊಬ್ಬ ಮಹಿಳೆಯನ್ನು ವಿಚಾರಣೆಗೆ ಕರೆಯಿಸಿದ್ದಾರೆ. ಅದೃಷ್ಟವಶಾತ್ ಆಕೆಯ ಕಾರ್ಡ್ ಹ್ಯಾಕ್ ಆಗಿರಲಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಅನ್ನು ಯಾರ ಮೂಲಕ ಈಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ಕಟ್ಟಲು ಬಳಸಿದ್ದಾಳೆ ಎಂದು ತಿಳಿದಾಗ ಮಹಿಳೆಗೆ ಶಾಕ್ ಕಾದಿತ್ತು.
ಟ್ವಿಟರ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಬೆಲೆತೆತ್ತ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ
“ಖರೀದಿಯ ವಹಿವಾಟನ್ನು ಟ್ರ್ಯಾಕ್ ಮಾಡಿದಾಗ ಕಾರ್ಡ್ ಬಳಸಿದ ಮಹಿಳೆ ಯಾರೆಂದು ನಮಗೆ ತಿಳಿದು ಬಂದಿದೆ. ಸೈಬರ್ ಕ್ರೈಂ ಇಲಾಖೆಯು ಆಕೆಗೆ ಸಮನ್ಸ್ ಕೊಟ್ಟು ಕರೆಯಿಸಿ ಪ್ರಶ್ನಿಸಿದ ವೇಳೆ, ಆಕೆಗೂ ಸಹ ತನ್ನ ಬಾಯ್ಫ್ರೆಂಡ್ಗೆ ಆಗಲೇ ಮದುವೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ” ಎಂದು ಪೊಲೀಸ್ ತನಿಖಾಧಿಕಾರಿ ಅಲ್ ಶೇಹಿ ತಿಳಿಸಿದ್ದಾರೆ.