alex Certify ಮುಂದಿನ ವರ್ಷದ ದೀಪಾವಳಿಗೆ ದುಬೈನಲ್ಲಿ ಹಿಂದೂ ದೇವಾಲಯ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ವರ್ಷದ ದೀಪಾವಳಿಗೆ ದುಬೈನಲ್ಲಿ ಹಿಂದೂ ದೇವಾಲಯ ಲೋಕಾರ್ಪಣೆ

ಕಳೆದ ವರ್ಷ ಅಗಸ್ಟ್​ನಲ್ಲಿ ಅಡಿಪಾಯ ಹಾಕಲಾಗಿದ್ದ ದುಬೈನ ಹಿಂದೂ ದೇವಾಲಯವು ಮುಂದಿನ ವರ್ಷದ ದೀಪಾವಳಿಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಗರದ ಜೆಬೆಲ್​ ಅಲಿ ಪ್ರದೇಶದಲ್ಲಿ ಗುರುನಾನಕ್​ ಸಿಂಗ್​ ದರ್ಬಾರ್​ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಈ ದೇವಾಲಯವು ಬುರ್​ ದುಬೈನ ಸಿಂಧಿ ಗುರು ದರ್ಬಾರ್​ನ ವಿಸ್ತರಣೆಯಾಗಿದೆ ಎಂದು ದುಬೈನ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ.

1950ರಿಂದ ದುಬೈನಲ್ಲಿರುವ ಸಿಂಧಿ ಗುರು ದರ್ಬಾರ್​ ದೇವಾಲಯವು ದುಬೈನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ದೇವಸ್ಥಾನದ ಟ್ರಸ್ಟಿ ರಾಜು ಶ್ರೋಫ್​, ದುಬೈನಲ್ಲಿ ತಲೆ ಎತ್ತುತ್ತಿರುವ ಈ ಹಿಂದೂ ದೇವಾಲಯವು ಯುನೈಟೆಡ್​ ಅರಬ್​ ಎಮಿರೇಟ್ಸ್ ಹಾಗೂ ದುಬೈ ನಾಯಕರ ಮುಕ್ತ ಮನಸ್ಸಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೇಳಿದ್ರು.

ದುಬೈ ಪತ್ರಿಕೆ ಮಾಡಿರುವ ವರದಿಯ ಪ್ರಕಾರ ಈ ದೇವಾಲಯದಲ್ಲಿ 11 ಹಿಂದೂ ದೇವತೆಗಳನ್ನ ಪ್ರತಿಷ್ಠಾಪನೆ ಮಾಡಲಾಗುವುದು ಎನ್ನಲಾಗಿದೆ. ದೇವಾಲಯದ ವಾಸ್ತು ಶಿಲ್ಪ ಅರೇಬಿಯನ್​ ಶೈಲಿಯಲ್ಲೇ ಇರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...