alex Certify ಜಗತ್ತಿನ ಅತಿ ದೊಡ್ಡ ಗ್ರೀಟಿಂಗ್ ಕಾರ್ಡ್ ಸೃಷ್ಟಿಸಿದ ಅನಿವಾಸಿ ಭಾರತೀಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತಿ ದೊಡ್ಡ ಗ್ರೀಟಿಂಗ್ ಕಾರ್ಡ್ ಸೃಷ್ಟಿಸಿದ ಅನಿವಾಸಿ ಭಾರತೀಯ

Dubai-based Indian Man Sets Record of Largest Greeting Card With Surface Area of 8.20 Square Metres

ಜಗತ್ತಿನ ಅತಿ ದೊಡ್ಡ ಪಾಪ್‌ಅಪ್ ಗ್ರೀಟಿಂಗ್‌ ಕಾರ್ಡ್ ಸೃಷ್ಟಿಸಿರುವ ಭಾರತ ಮೂಲಕ ದುಬೈ‌ ನಿವಾಸಿಯೊಬ್ಬರು, ಗಿನ್ನೆಸ್ ದಾಖಲೆ ಪುಸ್ತಕ ಸೇರಿಕೊಂಡಿದ್ದಾರೆ.

ರಾಮ್‌ಕುಮಾರ್‌ ಸಾರಂಗಪಾಣಿ ಹೆಸರಿನ ಈ ವ್ಯಕ್ತಿ ಅತಿ ಹೆಚ್ಚು ಗಿನ್ನೆಸ್ ದಾಖಲೆಗಳನ್ನು ಸೃಷ್ಟಿಸಿದ ಶ್ರೇಯ ಹೊಂದಿದ್ದು, ಈ ಹೊಸ ದಾಖಲೆಯೊಂದಿಗೆ ಅವರೀಗ 19ನೇ ಬಾರಿಗೆ ಗಿನ್ನೆಸ್ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆಯಿಸಿಕೊಂಡಿದ್ದಾರೆ.

ಸಾಮಾನ್ಯವಾದ ಪಾಪ್‌ಅಪ್ ಗ್ರೀಟಿಂಗ್ ಕಾರ್ಡ್‌ನ ನೂರು ಪಟ್ಟು ದೊಡ್ಡದಾದ ಸಾರಂಗಪಾಣಿ ಅವರ ಈ ಕಾರ್ಡ್‌ 8.20 ಚದರ ಮೀಟರ್‌ ವಿಸ್ತಾರವಿದ್ದು, ಈ ಹಿಂದಿನ ದಾಖಲೆಯಾದ 6.729 ಚ.ಮೀ. ವಿಸ್ತಾರದ ಕಾರ್ಡ್‌ಗಿಂತ ದೊಡ್ಡದಿದೆ. ಈ ಕಾರ್ಡ್‌ನಲ್ಲಿ ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನ ಮಂತ್ರಿ ಶೇಖ್‌ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್‌ರ ಕೊಲಾಜ್ ಚಿತ್ರಗಳನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...