ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸಿ ವಿಶ್ವದಾಖಲೆ ಮಾಡುವ ಗೀಳು ಆಗಿಂದಾಗೆ ನಡೆಯುತ್ತಲೇ ಇರುತ್ತದೆ. ಇದೀಗ ಸಣ್ಣ ಪೆಟ್ಟಿಗೆಯಲ್ಲಿ ಮೂರು ನಿಮಿಷಗಳಲ್ಲಿ ನೂರು ಯೋಗ ಭಂಗಿಗಳನ್ನು ಮಾಡಿದ ಬಾಲಕಿ ವಿಶ್ವ ದಾಖಲೆ ಮಾಡಿದ್ದಾಳೆ.
ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಬಾಲಕಿ ಸಮೃದ್ದಿ ಕಲಿಯಾ ಮೂರನೇ ಯೋಗ ದಾಖಲೆ ಯಶಸ್ವಿಯಾಗಿದ್ದು, ಒಂದು ತಿಂಗಳೊಳಗೆ ಎರಡನೆಯದು ಇದಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
11 ವರ್ಷ ವಯಸ್ಸಿನೊಳಗಿನವರ ‘ನಿರ್ಬಂಧಿತ ಜಾಗದಲ್ಲಿ ಅತಿ ವೇಗವಾಗಿ ನೂರು ಯೋಗ ಭಂಗಿ’ ಪ್ರದರ್ಶಿಸಿದ್ದಕ್ಕಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶಿಸಿದರು. ಮೂರು ನಿಮಿಷ 18 ಸೆಕೆಂಡುಗಳಲ್ಲಿ ಸವಾಲನ್ನು ಪೂರ್ಣಗೊಳಿಸಿದರು.